ವಬ್ರದುಂಗುರ

ಪರಮದಯಾಮಯನೂಕರುಣಾಳುವೂ ಆದ ಅಲ್ಲಾಹನ ನಾಮದಿಂದ

ಮಕ್ಕಳ ಬುದ್ದಿಯ ಬೆಳವಣಿಗೆ ಮತ್ತು ಅವರಲ್ಲಿ ಉತ್ತಮ ಗುಣನಡತೆಗಳನ್ನು ಉಂಟು ಮಾಡುವಲ್ಲಿ ಕಥೆಗಳ ಪಾತ್ರ ಬಹಳ ಮಹತ್ತರವಾದುದು. ಚಿಕ್ಕಂದಿನಲ್ಲಿ ಕೇಳಿದ ಕಥೆಗಳನ್ನು ಅವರು ಜೀವಮಾನವಿಡೀ ನೆನಪಿಡುತ್ತಾರೆ. ಅದರ ಪ್ರಭಾವವೂ ಜೀವನದಾದ್ಯಂತ ಅವರಲ್ಲಿ ಗೋಚರಿಸುತ್ತದೆ. ಶಾಂತಿ ಪ್ರಕಾಶನವು ಮಕ್ಕಳ ಮನೋಭಾವವನ್ನು ಗಮನದಲ್ಲಿಟ್ಟು ಹಲವು ಸಣ್ಣ ಕಥೆಗಳ ಪುಸ್ತಕಗಳನ್ನೂ ಹೊರ ತಂದಿದೆ. ಅವು ತುಂಬಾ ಜನಪ್ರಿಯತೆಯನ್ನೂ ಗಳಿಸಿದೆ ಎಂಬುದೂ ಸ್ಮರಣೀಯ. ಅಂತಹ ಪುಸ್ತಕಗಳಿಗೆ ಬೇಡಿಕೆಯೂ ಹೆಚ್ಚು.

ಮಕ್ಕಳ ಕಥೆಗಳಿಗಾಗಿ ಪ್ರಸಿದ್ಧರಾಗಿದ್ದ ಉತ್ತರ ಪ್ರದೇಶದ ಮಾಯಿಲ್‌ ಖೈರಾಬಾದಿಯವರ ನೂರಾರು ಕಥೆಗಳಿಂದ ಆಯ್ದು ಕೆಲವು ಕಡೌಗಳನ್ನು 'ವಜ್ರದುಂಗುರ' ಎಂಬ ಕಥಾ ಸಂಕಲನದ ಮೂಲಕ ಶಾಂತಿ ಪ್ರಕಾಶನ ಪ್ರಕಟಿಸುತ್ತಿದೆ. ಪ್ರತಿಯೊಂದು ಕಥೆಯಲ್ಲೂ ಮಕ್ಕಳಿಗೆ ಒಂದೊಂದು ನೀತಿಪಾಠವಿದೆ. ಮುಂದೆಯೂ ಅಲ್ಲಾಹನಿಚ್ಛಿಸಿದರೆ ಶಾಂತಿ ಪ್ರಕಾಶನವು ಇಂತಹ ಕಥಾ ಸಂಕಲನಗಳನ್ನು ಮತ್ತು ನೀಳ್ಗತೆಗಳನ್ನು ಪ್ರಕಟಿಸುತ್ತಾ ಇರುವುದು. ಮೂಲ ಉರ್ದು ಕಥೆಗಳನ್ನು ಅಮಾನುಲ್ಲಾ ಖಾನ್‌ ತರೀಕೆರೆ, ಮರ್ಯಮ್‌ ಶಹೀರ ಮತ್ತು ಸಬೀಹಾ ಫಾತಿಮಾರವರು ಕನ್ನಡಕ್ಕೆ ಸುಂದರವಾಗಿ ಬಾಹಷಾಂತರಿಸಿದ್ದಾರೆ. ಪುಸ್ತಕವು ಮಕ್ಕಳಿಗೆಂಬಂತೆ ಕಡಾ ಪ್ರಿಯರೆಲ್ಲರಿಗೂ ಪ್ರಯೋಜನಕಾರಿಯಾಗಲೆಂದು ಹಾರೈಸುತ್ತೇವೆ.

ಜು. ಶಾಂತಿ ಪ್ರಕಾಶನ

.- ಮರ ಕಡಿಯುವವ

- -ವಜ್ರದುಂಗುರ

ದುರಾಸೆಯ ಫಲ ಸತ್ಯಸಂಧ ಮಾಲಿ ಇಬ್ಬರು ಧನಿಕರು ಚಾಲಕಸ

- ಶ್ರೀಮಂತನ ವ್ಯಥೆ

ವಿಷದ ಹಣ್ಣು

ಹೆದಿಮೂರು ವರ್ಷದ ಹುಡುಗಿಯ ತಾಯಿ ತೀರಿಕೊಂಡಳು. ತಂದೆ ಮೊದಲೇ ಮರಣ ಹೊಂದಿದ್ದನು. ಆಕೆಯನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಈಗ ಆಕೆ ಅನಾಥೆ. ಆಕೆ ತುಂಬಾ ಯೋಚಿಸಿದಳು. ಕೊನೆಗೆ ತನ್ನ ಅಜ್ಜಿಯ ಮನೆಗೆ ಹೋಗಲು ನಿರ್ಧರಿಸಿದಳು. ದೂರದೂರಿನಲ್ಲಿರುವ ಅಜ್ಜಿಯ ಮನೆಗೆ ಕರೆದುಕೊಂಡು ಹೋಗುವವರು ಯಾರೂ ಇರಲಿಲ್ಲ. ಯಾರಾದರೂ ಅತ್ತ ಹೋಗುವವರು ಸಿಕ್ಕಿದರೆ ಅವರ ಜೊತೆ ಹೋಗುವುದೆಂದು ಆಕೆ ನಿರ್ಧರಿಸಿದಳು.

رک وس سر

Re ಹೀಗಿರಲು ಮದುವೆಯ ತಂಡವೊಂದು ಅತ್ತ ಹೋಗುವುದು ಕಂಡಿತು. ಬುದ್ಧಿವಂತೆಯಾದ ಹುಡುಗಿಯೂ ಅದರ ಜೊತೆ ಸೇರಿದಳು. ತಂಡವು ಮುಂದಕ್ಕೆ

ಸಾಗುತ್ತಾ ಹಸಿರಿನಿಂದ ತುಂಬಿದ ಒಂದು ಕಾಡಿಗೆ ತಲಪಿತು. ಕಾಡಿನಲ್ಲಿ ಒಂದು ದೊಡ್ಡ

6 ۱ ಪಚ್ರದುಂಗುರ

ಮರ ಬೆಳೆದು ತನ್ನ ರೆಂಬೆಕೊಂಬೆಗಳನ್ನು ವಿಶಾಲವಾಗಿ ಚಾಚಿತ್ತು. ಹಸಿರು ತುಂಬಿ ಅದು ಕಂಗೊಳಿಸುತ್ತಿತ್ತು. ಅದರಲ್ಲಿ ತುಂಬಾ ಹಣ್ಣುಗಳು ತುಂಬಿತ್ತು. ಮದುವೆ ತಂಡವು ಮರದ ಕೆಳಗೆ ತಂಗಿತು. ಮರದ ಹಣ್ಣುಗಳನ್ನು ನೋಡಿ ತಂಡದಲ್ಲಿದ್ದವರ ಬಾಯಲ್ಲಿ ನೀರೂರಿತು, ಕೆಲವರು ಹಣ್ಣುಗಳನ್ನು ಕೀಳೆಲಾರಂಭಿಸಿದರು.

ಇನ್ನೇನು ಅವರು ಹಣ್ಣನ್ನು ಕಚ್ಚುವುದರೆಲ್ಲಿದ್ದರು, ಹುಡುಗಿ- بھھ'‎ ವಿಷ" ಎಂದು ಬೊಬ್ಬಿಟ್ಟಿಳು. ಜನರಿಗೆ ಆಶ್ಚರ್ಯ! ಆಕೆ ಮರದ ಹಣ್ಣುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಳು. 'ಯಾರೂ ಮರದ ಹಣ್ಣನ್ನು ತಿನ್ನಬಾರದು. ತಿಂದರೆ ಸಾವು ಖಂಡಿತ' ಎಂದು ದಿಟ್ಟ ಸ್ವರದಲ್ಲಿ ಹೇಳಿದಳು. ತಂಡದ ಕೆಲವು ಹಿರಿಯರು- 'ಅಲ್ಲ ಮಗಳೇ! ನೀನು ದಾರಿಯಾಗಿ ಎಂದೂ ಬಂದಿಲ್ಲವಲ್ಲ. ಮರದ ಹಣ್ಣು ತಿಂದರೆ ಸಾವು ಖಂಡಿತ ಎಂದು ಹೇಗೆ ಹೇಳುತ್ತಿ?' ಎಂದು ವಿಚಾರಿಸಿದರು.

ಜಾಣ ಹುಡುಗಿ ಹೀಗೆ ಉತ್ತರಿಸಿದಳು- 'ನೋಡಿದಿರಾ! ಕಾಡಿನ ಯಾವ ' ಮರದಲ್ಲೂ ಹಣ್ಣುಗಳಿಲ್ಲ. ಒಂದು ಮರದಲ್ಲಿ ಹಣ್ಣು ಕಾಯಿಗಳು ಗೊಂಚಲು ಗೊಂಚಲಾಗಿ ನೇತಾಡುತ್ತಿವೆ. ಇಲ್ಲಿ ಯೋಚಿಸಬೇಕಾದ ಸಂಗತಿಯೊಂದಿದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಕಾಡಿನ ಎಲ್ಲಾ”ಮರಗಳ ಹಣ್ಣುಗಳನ್ನು ಕೊಯ್ದು ತಿಂದಿದ್ದಾರೆ. ಮರದ ಹಣ್ಣುಗಳನ್ನು ಮಾತ್ರ ಮುಟ್ಟಿಯೂ ನೋಡಲಿಲ್ಲ. ನಿಮಗೆ ಅರ್ಡಿವಾಗುವುದಿಲ್ಲವೇ? ಅವು ವಿಷಪೂರಿತ ಹಣ್ಣುಗಳಾಗಿರುವುದರಿಂದಲೇ ಹಾಗೆ ಬಿಟ್ಟಿದ್ದಾರೆ. ಆದುದರಿಂದ ನಾವೂ ಅದನ್ನು ತಿನ್ನಬಾರದು."

ತಂಡದವರಿಗೆ ಹುಡುಗಿಯ ಮಾತನ್ನು ನಂಬಲಾಗಲಿಲ್ಲ. ಆದರೆ ಹಣ್ಣುಗಳನ್ನು ತಿನ್ನುವ ಧೈರ್ಯ ಯಾರಿಗೂ ಇರಲಿಲ್ಲ. ಅವರು ಆಕೆಯ ಮಾತನ್ನು ಪರೀಕ್ಸಿಸ ಬಯಸಿದರು. ಹಣ್ಣನ್ನು ಒಂದು ಪ್ರಾಣಿಗೆ ತಿನ್ನಿಸಿದರು. ಅದು ತಿಂದ ಕೂಡಲೇ ಚಡಪಡಿಸಿ ಸತ್ತು ಹೋಯಿತು. ಜನರಿಗೆ-ನಿಜ ಸಂಗತಿ ತಿಳಿಯಿತು. ತಮ್ಮ ಜೀವ ಉಳಿಸಿದ ಬುದ್ಧಿವಂತೆ ಹುಡುಗಿಯ ಜಾಣ್ಮೆಯನ್ನು ನೋಡಿ ಸಂತೋಷ ಪಟ್ಟರು. ಆಕೆಯನ್ನು ಅವಳ ಅಜ್ಜಿಯ ಮನೆಗೆ ಸುರಕ್ತಿತವಾಗಿ ತಲುಪಿಸಿದರು.

٭٭

ತುಂಡು ರೊಟಿ 7

ಒಂದು ಪ್ರದೇಶದಲ್ಲಿ 'ಶಾಹ್‌ ಕಿರ್ಮಾನಿ' ಎಂಬ ಓರ್ವ ದೇವಭಕ್ತರು ವಾಸಿಸುತ್ತಿದ್ದರು. ಮೊದಲು ಅವರು ಒಂದು ಸಾಮ್ರಾಜ್ಯದ ಅರಸರಾಗಿದ್ದರು. ಕಾಲ ಕ್ರಮೇಣ ಅವರ ಮನಸ್ಸು ಲೋಕದಿಂದ ವಿರಕ್ಷವಾದಾಗ ಅವರು ಎಲ್ಲವನ್ನೂ

ತೊರೆದು ಬಡವನಾಗಿ ಜೀವಿಸ ತೊಡಗಿದರು. ಇಡೀ ದಿನವನ್ನು ಅಲ್ಲಾಹನ‏ ۔ ಸ್ಮರಣೆಯಲ್ಲಿ ಕಳೆಯ ತೊಡಗಿದರು. ಅವರಿಗೆ ದೇವನ ಮೇಲೆ ಎಷ್ಟು‏

تت۳ددلریلن 8

ನಂಬಿಕೆಯಿತ್ತೆಂದರೆ ಇದ್ದುದೆಲ್ಲವನ್ನೂ ಬಡಬಗ್ಗರಿಗೆ ದಾನ ಮಾಡುತ್ತಿದ್ದರು. ನಾಳೆಯ ಯೋಚನೆಯನ್ನು ಸುಳಿಯಲೂ ಬಿಡುತ್ತಿರಲಿಲ್ಲ.

ಅವರಿಗೆ ಓರ್ವ ಪುತ್ರಿ ಇದ್ದಳು. ಆಕೆಯೂ ಬಹಳ ಒಳ್ಳೆಯ ಸ್ವಭಾವದವಳು. ಬಡವರ ಬಗ್ಗೆ ಕನಿಕರವಿರುವ ಹುಡುಗಿಯಾಗಿದ್ದಳು. ಆಕೆ ಬೆಳೆದು ನಿಂತಾಗ ಅನೇಕರು ಆಕೆಯನ್ನು ವಿವಾಹವಾಗಲು ಮುಂದಾದರು. ವಿವಾಹ ಸಂದೇಶ ಕಳುಹಿಸಿದವರಲ್ಲಿ ರಾಜ ಮನೆತನಕ್ಕೆ ಸೇರಿದವರೂ ಇದ್ದರು. ಆದರೆ ಶಾಹ್‌ ಕಿರ್ಮಾನಿಯವರು, ಓರ್ವ ಸದ್ಭಕ್ತ ಬಡವ್ಯಕ್ತಿಗೆ ತಮ್ಮ ಮಗಳನ್ನು ವಿವಾಹ ಮಾಡಿಕೊಟ್ಟರು.

ಮದುವೆಯಾಗಿ ಗಂಡನ ಮನೆಯನ್ನು ಸೇರಿದ ಆಕೆಗೆ ಅಲ್ಲಿ ರಾತ್ರಿಯ ಉಳಿದ ರೊಟ್ಟಿಯ ತುಂಡು ಇಟ್ಟಿರುವುದು ಕಾಣಿಸುತ್ತದೆ. ಅದೇನೆಂದು ಆಕೆ ಪತಿಯೊಡನೆ ವಿಚಾರಿಸುತ್ತಾಳೆ- 'ಅದು ನಿನ್ನೆಯ ರೊಟ್ಟಿಯ ತುಂಡು. ಇಂದಿನ ಉಪಯೋಗಕ್ಕೆ ಬರಬಹುದೆಂದು ಭಾವಿಸಿ ಅದನ್ನು ಇಟ್ಟಿದ್ದೆ' ಎಂದು ಆಕೆಯ ಪತಿ ಉತ್ತರಿಸುತ್ತಾರೆ. ಆಕೆ ಹೇಳುತ್ತಾಳೆ- 'ಹಾಗಾದರೆ ಇಲ್ಲಿ ನನ್ನ ಬಾಳ್ವೆ ಕಷ್ಟ ಸಾಧ್ಯ!' ಆಗ ಆಕೆಯ ಪತಿ- 'ಹೌದು, ಕನ್ಮೆಯೊಂದಿಗೆ ಬಾಳ್ವೆ ನಡೆಸುವುದು ಕಷ್ಟಸಾಧ್ಯ ಎಂದು ನಾನು ಮೊದಲೇ ಭಾವಿಸಿದ್ದೆ.' ಕೂಡಲೇ وہ‎ 'ಇಲ್ಲ! ಹಾಗಲ್ಲ, ನಾನು ನಿಮ್ಮನ್ನು ವಿಶಾಲ ಮನಸ್ಸಿನವರೆಂದು ಭಾವಿಸಿದ್ದೆ. ಬಡವರ ಮತ್ತು ನಿರ್ಗತಿಕರ ಬಗ್ಗೆ ಕಾಳಜಿ ನಿಮಗಿರುತ್ತದೆಂದು ನಂಬಿದ್ದೆ, ಆದರೆ ನನ್ನ ಅನಿಸಿಕೆ ಸುಳ್ಳಾಗಿದೆ." b

ಪಶಿ: 'ನೀನು ಹೇಳುವುದು ಅರ್ಥವಾಗುತ್ತಿಲ್ಲ."

ಪತ್ನಿ: 'ಉಳಿದಿರುವ ರೊಟ್ಟಿಯ ತುಂಡು ನಿನ್ನೆ ಊಟವಿಲ್ಲದೆ ಹಸಿವೆಯಿಂದ ಮಲಗಿದ ಬಡ ಬಗ್ಗರ ಹಕ್ಕು. ಅವರ ಪೈಕಿ ಯಾರ ಪಾಲಿಗಾದರೂ ರೊಟ್ಟಿ ನಿನ್ನೆಯೇ ಹೋಗಿದ್ದರೆ ಎಷ್ಟು ಚೆನ್ನಾಗಿತ್ತು. ಆದರೆ ನೀವು ಇದನ್ನು ಉಳಿಸಿಕೊಂಡಿರಿ. ಹಾಗಿರುವಾಗ ನನಗೆ ನಿಮ್ಮೊಂದಿಗೆ ಸರಿ ಹೋದೀತೇ?'

ಪತ್ನಿಯ ಮಾತನ್ನು ಕೇಳಿ ಅವರಿಗೆ ನಾಚಿಕೆಯಾಯಿತಲ್ಲದೆ ಬುದ್ಧಿವಾದವೂ ದೊರೆತಂತಾಯಿತು. ಕೂಡಲೇ ಅವರು ರೊಟ್ಟಿಯನ್ನು ಅಪೇಕ್ಷಿತರಿಗೆ ನೀಡಲು ಹೊರಟು ನಿಂತರು.

ಶೇಕ್‌

ಮರ ಕಡಿಯುವವ

ಹೌಾತಿಮ್‌ ಬಹುದೊಡ್ಡ ಧರ್ಮಿಷ್ಮರಾಗಿದ್ದರು. ಅವರು ಬಡವರಿಗೆ ತುಂಬು ಮನಸ್ಸಿನಿಂದ ನೆರವಾಗುತ್ತಿದ್ದರು. ನಿರ್ಗತಿಕರಿಗೂ, ಅನಾಥರಿಗೂ, ಧರ್ಮಾರ್ಥ ಉಣ ಬಡಿಸುತ್ತಿದ್ದರು. ಹಾತಿಮ್‌ರ ಮನೆಯಲ್ಲಿ ಯಾವಾಗಲೂ ಬಹಳ ಜನರು ಇರುತ್ತಿದ್ದರು. ಅಲ್ಲಿ ಒಂದು ಹೊತ್ತಿನ ಆಹಾರ ಸೇವಿಸುವುದನ್ನು ಊರವರು ಅಭಿಮಾನದ ವಿಷಯವೆಂದು ಭಾವಿಸುತ್ತಿದ್ದರು. ಬಡವ-ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲರೂ ಹಾತಿಮ್‌ರ ಸತ್ಕಾರ ಕೂಟದಲ್ಲಿ ಭಾಗವಹಿಸುತ್ತಿದ್ದರು.

ಒಮ್ಮೆ ಹಾತಿಮ್‌ ಓರ್ವ ಮಿತ್ರನ ಜೊತೆ ವಿಹಾರಕ್ಕೆಂದು ಹೊರಟಿದ್ದರು. ವಿವಿಧ ವಿಷಯಗಳಲ್ಲಿ ಚರ್ಚಿಸುತ್ತಾ ನಡೆಯುವಾಗ ಮಿತ್ರನಿಗೆ ಒಂದು ಸಂದೇಹ ಬಂತು. ಊರಿನಲ್ಲಿ ಹಾತಿಮ್‌ರಿಗಿಂತ ದೊಡ್ಡ ಧರ್ಮಿಷ್ಮರಿದ್ದಾರೆಯೇ? ದೇವನು ನೀಡಿರುವ ಸಂಪತ್ತಿನ ಹೆಚ್ಚಿನ ಪಾಲನ್ನು ಜನಸೇವೆಗಾಗಿ ವ್ಯಯಿಸುತ್ತಿರುವ ಹಾತಮ್‌ರೇ ಮಹಾದಾನಿಯೆಂದು ಮಿತ್ರನ ಭಾವನೆಯಾಗಿತ್ತು. ಆದರೆ ಹಾತಿಮ್‌ರು ಅದನ್ನು ಒಪ್ಪದೆ, ಮಿತ್ರನ ತಪ್ಪು ಭಾವನೆಯನ್ನು ತಿದ್ದಿದರು. ಏನು? ನಿಮಗಿಂತ ಉದಾರಿಗಳು ಊರಿನಲ್ಲಿದ್ದಾರೆಯೇ? 'ಹೌದು, ನನಗಿಂತ ಶ್ರೇಷ್ಠರಾದವರು ಊರಿನಲ್ಲಿ ಒಬ್ಬರಿದ್ದಾರೆ' ಹಾತಿಮ್‌ ಹೇಳಿದರು.

ಊರಿನ ಅನೇಕ ಗಣ್ಯ ವ್ಯಕ್ತಿಗಳ ಹೆಸರು ಮಿತ್ರನ ಮನದಲ್ಲಿ ಸುಳಿದಾಡಿತು. ಆದರೆ ಅವರು ಹಾತಿಮ್‌ರಷ್ಟು ಒಳ್ಳೆಯವರಾಗಿರಲಿಲ್ಲ. ಎಷ್ಟೇ ಆಲೋಚಿಸಿದರೂ ಮಿತ್ರನಿಗೆ ಯಾರನ್ನೂ ಗುರುತಿಸಲಾಗಲಿಲ್ಲ. ಕೊನೆಗೆ ಸೋಲೊಪ್ಪಿ ಹಾತಿಮ್‌ರೊಡನೆಯೇ ಬಗ್ಗೆ ವಿಚಾರಿಸಿದರು.

ಹಾತಿಮ್‌ ಹೇಳಿದರು- 'ಓರ್ವ ಬಡ ಮರ ಕಡಿಯುವವ' 'ಏನು? ಓರ್ವ ಮರ ಕಡಿಯುವ ಬಡವನು ನಿಮಗಿಂತ ಶ್ರೇಷ್ಠನೇ? ಅದು ಹೇಗೆ? ಮಿತ್ರನ ಸಂದೇಹವು ಪ್ರಶ್ನೆಯಾಗಿ ಹೊರಬಂತು. ಹಾತಿಮ್‌ ತನ್ನ ಅಭಿಪ್ರಾಯವನ್ನು ವಿವರಿಸತೊಡಗಿದರು.

'ಒಂದು ದಿನ ನಾನು ಒಂಟಿಯಾಗಿ ತಿರುಗಾಡಲು ಹೋಗಿದ್ದೆ. ಹಾಗೆಯೇ ನಡೆಯುತ್ತಾ ಊರಿನ ಗಡಿಯಲ್ಲಿರುವ ಕಾಡನ್ನು ತಲುಪಿದೆ. ಹತ್ತಿ ರದಲ್ಲಿಯೇ ಓರ್ವ ವೃದ್ಧನು ಒಣ ಕಟ್ಟಿಗೆ ತುಂಡುಗಳನ್ನು ಶೇಖರಿಸುತ್ತಿದ್ದನು. ಆತ ಸ್ವಲ್ಪ ನಡೆದರೂ ಏದುಸಿರು ಬಿಡುತ್ತಿದ್ದನು. ಮರ ಕಡಿಯುವಷ್ಟು ತ್ರಾಣ ಅವನಿಗಿರಲಿಲ್ಲ. ಆತ ಹಸಿವು

10۱1۷ ವಜ್ರದುಂಗುರ

ದಾಹಗಳಿಂದ ಬಳಲಿ ಬೆಂಡಾಗಿರುವುದನ್ನು ಅವನ ಮುಖಭಾವವೇ ತಿಳಿಸುತ್ತಿತ್ತು. ನಾನು ಆತನನ್ನು ಸಮೂಪಿಸಿ, "ಹೇಗಿದ್ದೀರಿ? ಏನು ವಿಶೇಷ?' ಎಂದು ಪ್ರಶ್ನಿಸಿದೆ.

ವೃದ್ಧ: 'ಮಿತ್ರಾ, ಎಲ್ಲಿಯ ವಿಶೇಷ? ಬೆಳಗ್ಗಿನಿಂದ ತನಕ ದುಡಿದು ಕೇವಲ ಇಷ್ಟು ಸೌದೆ ಸಂಗ್ರಹಿಸಿದ್ದೇನೆ. ಇದನ್ನು ಕೂಡಲೇ ಊರಿಗೆ ಸಾಗಿಸಿ ಮಾರಬೇಕು. ಅದನ್ನು ಮಾರಿ. ದೊರೆತ ಹಣದಿಂದ ಅಡುಗೆ ಮಾಡಲಿಕ್ಕೆ ಅಕ್ಕಿ ಖರೀದಿಸಬೇಕಾಗಿದೆ.'

ಹಾತಿಮ್‌: "ಓಹೋ! ಹಾಗೋ ಸಮಾಚಾರ? ಇದಕ್ಕಾಗಿ ನೀವು ಇಷ್ಟು ಕಷ್ಟಪಡಬೇಕೇ? ಇಂದು ಶ್ರೀಮಂತ ಹಾತಿಮ್‌ರ ಮನೆಯಲ್ಲಿ ಔತಣವಿದೆಯಲ್ಲವೇ? ಊರವರೆಲ್ಲರೂ ಅಲ್ಲಿಗೆ ಹೋಗುತ್ತಾರೆ. ನೀವು ಹೋದರೆ ನಿಮಗೂ ಅಲ್ಲಿ ಊಟ ದೊರೆಯುವುದು.'

ವೃದ್ಧನು ನನ್ನ ಮುಖವನ್ನು ದಿಟ್ಟಿಸಿ ನೋಡಿದ ಬಳಿಕ ಹೇಳಿದ: 'ನಿಮ್ಮನ್ನು ನೋಡಿದಾಗ ಓರ್ವ ಸಭ್ಯನಂತೆ ಕಂಡಿತು. ಆದರೆ ನಿಮ್ಮ ಮಾತು ಕೇಳಿದಾಗ ಬಗ್ಗೆ ಸ್ವಲ್ಪ ಸಂದೇಹವಾಗುತ್ತಿದೆ. ಚಿಂತಿಲ್ಲ. ಅದಕ್ಕಾಗಿ ಮುದುಕನನ್ನು ಕ್ಷಮಿಸಿ ಬಿಡಿರಿ.

ಮರ ಕಡಿಯುವವ 11

ಅಯ್ಯೊ! ನಿಮಗೆ ಮಾತು ಹೇಳಲು ನಾಚಿಕೆಯಾಗುವುದಿಲ್ಲವೇ? ಐಶ್ವರ್ಯವಂತನಾಗಿರುವ ಹಾತಿಮ್‌, ದಾನಧರ್ಮ ಮಾಡುತ್ತಾರೆ. ಅದರಿಂದ ಅವರಿಗೆ : ಪುಣ್ಯ ಸಿಗುತ್ತದೆ. ಆದರೆ ಅಲ್ಲಿ ಹೋಗಿ ಬೇಡಲು ನನ್ನ ಸ್ವಾಭಿಮಾನ ಬಿಟ್ಟೀತೇ?" ಮುದುಕ. ಸ್ವಲ್ಪ ಜೋರಾಗಿಯೇ ಪ್ರಶ್ನಿಸಿದ್ದ. ಏನು ಉತ್ತರಿಸಲೆಂದೇ ನನಗೆ ತಿಳಿಯಲಿಲ್ಲ.

ಮುದುಕ ಸ್ವಲ್ಪ ತಡೆದು, 'ದೇವನು ನಮಗೆ ಬುದ್ದಿ ಕೊಟ್ಟಿದ್ದಾನೆ. ಅದರಿಂದ ನಾವು ಸ್ವಲ್ಪ ಆಲೋಚಿಸಬೇಕು. ದೇವನು ನಮಗೆ ಕಣ್ಣು ಕೊಟ್ಟಿದ್ದಾನೆ. ನಾವು ಅವುಗಳಿಂದ ನೋಡಿ ತಿಳಿಯಬೇಕು. ದೇವನು ನಮಗೆ ಕಿವಿ ಕೊಟ್ಟಿದ್ದಾನೆ. ಅದರಿಂದ ಕೇಳಬೇಕು. ದೇವನು ನಮಗೆ ಕೈಗಳನ್ನು ಕೊಟ್ಟಿದ್ದಾನೆ. ಅದರಿಂದ ದುಡಿಯಬೇಕು. ನಮಗೆ ಬೇಕಾದ ಆಹಾರವನ್ನೂ ಸಂಪಾದಿಸಲಾಗದಿದ್ದರೆ ಮರದ ತುಂಡಿಗೂ ನಮಗೂ ಯಾವ ವ್ಯತ್ಯಾಸವಿದೆ? ದೇವನು ಕೊಟ್ಟ ಸಾಮರ್ಥ್ಯ ಬಳಸಿ ನಾವು ಆಹಾರ ಸಂಪಾದಿಸಬೇಕು. ಬೇಡುವುದಲ್ಲ.' ಮಾತುಗಳನ್ನು ಹೇಳುವಾಗ ಮುದುಕನ ಸ್ವರವು ಕೋಪದಿಂದ ಕಂಪಿಸುತ್ತಿತ್ತು. 'ಅಯ್ಕೋ, ಮಿತ್ರಾ! ನನಗೆ ಸುಮಾರು 70 ವರ್ಷ ಮೂರಿದೆ. ತನಕ ನಾನು ದುಡಿದೇ ಬದುಕುತ್ತಿದ್ದೇನೆ. ಇನ್ನು ಮುಂದೆ ನಾನು ಎಷ್ಟು ಕಾಲ ಬದುಕುವೆನೆಂದು ಹೇಳ ಬರುವುದಿಲ್ಲ. ಜೀವನಾಂತ್ಕದ ವರೆಗೆ ದುಡಿದುಣ್ಣುವ ತ್ರಾಣ ನೀಡು ಎಂಬುದೇ ನನ್ನ ಪ್ರಾರ್ಥನೆ. ಪರಾವಲಂಬಿಯಾಗು ವುದಕ್ಕಿಂತ ಗೋರಿ ಸೇರುವುದು ಉತ್ತಮವಲ್ಲವೇ?' ನಾನು ಹೌದೆಂದು ಒಪ್ಪದೆ..

ವೃದ್ಧ: 'ಮಿತ್ರಾ ಕ್ಷಮಿಸು, ತುಂಬಾ ತಡವಾಯಿತು. ಇದನ್ನು ಬೇಗನೆ ಪೇಟೆಗೆ ತಲುಪಿಸಬೇಕು. ನಾನು ಹೋಗುತ್ತೇನೆ' ಎನ್ನುತ್ತಾ ಸೌದೆ ಕಟ್ಟನ್ನು ಭುಜದ ಮೇಲೇರಿಸಿ ಮುದುಕ ಹೊರಟೇ ಬಿಟ್ಟ. ಘಟನೆಯನ್ನು ವಿವರಿಸಿದ ಬಳಿಕ ಹಾತಿಮ್‌ ಮಿತ್ರನೊಡನೆ ಹೇಳಿದರು: 'ನೀವು ಹೇಳಿದಂತೆ ನಾನೋರ್ವ ದಾನಿಯೆಂದು ಒಪ್ಪುತ್ತೇನೆ. ಆದರೆ ಆತ್ಮಾಭಿಮಾನವನ್ನು ಕೈ ಬಿಡದೆ, ಸಂಕಷ್ಟದಲ್ಲಿದ್ದರೂ تیادہ‎ ಮುಂದೆ ಕೈಚಾಚದೆ ದುಡಿಯುವ ಮುದುಕನ ಮುಂದೆ ನಾನು ತೀರಾ ಸಣ್ಣವನು.'

ಪ್ರಿಯ ಮಿತ್ರಾ! ಈಗ ನೀನೇ ಹೇಳು. ಆತನೇ ಶ್ರೇಷ್ಠನಲ್ಲವೇ? ಹಾತಿಮ್‌ ಮಿತ್ರನನ್ನು ಪ್ರಪ್ನಿಸಿದರು.

ಇ"

ع٭

ವಜ್ರದುಂಗುರ

ಒಂದಾನೊಂದು ಕಾಲದಲ್ಲಿ ಅರೇಬಿಯಾದಲ್ಲಿ ನಡೆದ ಘಟನೆ. ವಯೋವೃದ್ಧನಾದ ಓರ್ವ ಧನಿಕನಿದ್ದನು. ಅವನು ತನ್ನ ಆಸ್ತಿಪಾಸ್ತಿಗಳನ್ನು ತನ್ನ ಮೂವರು ಮಕ್ಕಳಲ್ಲಿ ಸಮನಾಗಿ ಹಂಚಿದನು. ಕೊನೆಗೆ ತನ್ನಲ್ಲಿ ಉಳಿದಿದ್ದ ವಜ್ರದುಂಗುರವನ್ನು ಮಕ್ಕಳಿಗೆ ತೋರಿಸುತ್ತಾ 'ಮಕ್ಕಳೇ, ಇನ್ನು ನೀವೆಲ್ಲರೂ ಹೋಗಿರಿ. ಒಂದು ವರ್ಷದ ಬಳಿಕ ನನ್ನ ಬಳಿಗೆ ಬರಬೇಕು. ತರುವಾಯ, ಒಂದು ವರ್ಷದಲ್ಲಿ ನೀವು ಮಾಡಿದ ಯಾವುದಾದರೂ ಒಳ್ಳೆಯ ಕೆಲಸವನ್ನು ನನಗೆ ತಿಳಿಸಬೇಕು. ನಿಮ್ಮಲ್ಲಿ ಅತ್ಕುತ್ತಮನೆಂದು ಮನಗಂಡವನಿಗೆ ನಾನು ಇದನ್ನು ಕೊಡುತ್ತೇನೆ' ಎಂದನು.

ಒಂದು ವರ್ಷದ ಬಳಿಕ ಮೂವರು ಮಕ್ಕಳೂ ತಂದೆಯ ಮುಂದೆ ಹಾಜರಾದರು. 'ಮಕ್ಕಳೇ, ನಿಮ್ಮ ವೃತ್ತಾಂತವನ್ನು ತಿಳಿಸಿರಿ' ವೃದ್ಧನು ಹೇಳಿದನು. 'ಅಪ್ಪಾ, ಒಮ್ಮೆ ಓರ್ವ ಅಪರಿಚಿತನು ತನ್ನ ಸಂಪತ್ತೆಲ್ಲವನ್ನೂ ನನಗೆ ವಹಿಸಿಕೊಟ್ಟು

ವೆಜ್ರದುಂಗುರ 13

ದೇಶಾಂತರ ಹೊರಟನು. ಹಲವು ದಿನಗಳ ವರೆಗೆ ಆತ ಮರಳೆಲಿಲ್ಲ. ಆದರೆ, ನಾನು ಅದರಿಂದ ಒಂದು ಪೈಸೆಯನ್ನೂ ಖರ್ಚು ಮಾಡಲಿಲ್ಲ. ಕೆಲವು ತಿಂಗಳುಗಳ ಬಳಿಕ ಆತ ಮರಳಿದನು. ತುಂಬಾ ಪ್ರಾಮಾಣಿಕವಾಗಿ ಆತನ ಸೊತ್ತನ್ನು ಅವನಿಗೆ ಮರಳಿಸಿದೆನು. ಆದ್ದರಿಂದ ವಜ್ರದುಂಗುರ ನನಗೆ ಕೊಡಿರಿ' ಎಂದು ದೊಡ್ಡ ಮಗನು ಹೇಳಿದನು. ತಂದೆ ಹೇಳಿದರು: 'ಮಗನೇ ನಿನ್ನ ಮೇಲೆ ಭರವಸೆಯಿಟ್ಟವರಲ್ಲಿ ಮಾಡಬೇಕಾದ ಕಡ್ಡಾಯ ಕರ್ತವ್ಯ್ಮವನ್ನಷ್ಟೆ ನೀನು ಪೂರೈಸಿರುವೆ. ಆದ್ದರಿಂದ ಅದು ವಜ್ರ ದುಂಗುರಕ್ಕೆ ಅರ್ಹವಾದ ವಿಶೇಷ ಕಾರ್ಯವಲ್ಲ.'

ಬಳಿಕ ಎರಡನೆಯವನು ತನ್ನ ಕಥೆ ಹೇಳಲಾರಂಭಿಸಿದನು- "ಅದೊಂದು ದಿನ ನಾನು ನದಿಯ ದಡದಲ್ಲಿ ನಡೆಯುತ್ತಾ ಹೋಗುತ್ತಿದ್ದೆನು. ಆಕಸ್ಮಿಕವಾಗಿ ಯಾರೋ ಅಪರಿಚಿತನೋರ್ವನು ನೀರಿನಲ್ಲಿ ಮುಳುಗಿ ಸಾಯುತ್ತಿರುವುದನ್ನು ನೋಡಿದೆ. ತಕ್ಷಣವೇ ನಾನು ನೀರಿಗೆ ಧುಮುಕಿ ಅವನನ್ನು ರಕ್ಷಿಸಿದೆ. ಆದ್ದರಿಂದ ವಚ್ರದುಂಗುರವನ್ನು ನನಗೆ ಕೊಡಿರಿ' ಎಂದನು. 'ಮಗನೇ, ನೀನು ನಿನ್ನ ಸಹೋದರನ ಕರ್ತವ್ಯವನ್ನು ಮಾತ್ರವೇ ನೆರವೇರಿಸಿರುವೆ. ಆದ್ದರಿಂದ ವಜ್ರದುಂಗುರಕ್ಕೆ ನೀನು ಅರ್ಹನಾಗುವುದಿಲ್ಲ' ತಂದೆ ಹೇಳಿದರು.

ಕೊನೆಗೆ ವೃದ್ಧನು ಕಿರಿಯ ಮಗನ ಮುಖ ನೋಡಿದನು. 'ಮಗನೇ ನಿನ್ನ ಕಥೆ" ಹೇಳು.' 'ಅಪ್ಪಾ ನನಗೋರ್ವ ಶತ್ರುವಿದ್ದನು. ಯಾವ ಕ್ಷಣದಲ್ಲಿಯೂ ನನ್ನ ಮೇಲೆ ಹಲ್ಲೆ ನಡೆಸಲು ಹೊಂಚು ಹಾಕುತ್ತಿದ್ದನು. ಜನರ ನಡುವೆ ಅವನು ನನ್ನನ್ನು ಅನೇಕ ಬಾರಿ ಅಪಮಾನಿಸಿದ್ದನು. ಅದೊಂದು ದಿನ ನಾನು ನಿರ್ಜನವಾದ ಕಾಡು ದಾರಿಯಲ್ಲಿ ಹೋಗುತ್ತಿದ್ದೆನು. ಆಗ ನನ್ನ ಶತ್ರುವು ಒಂದು ಮರದಡಿಯಲ್ಲಿ ಬಿದ್ದು ನರಳುತ್ತಿರುವುದನ್ನು ನೋಡಿದೆ. ಬಳಲಿಕೆಯಿಂದ ಆತನು 'ನೀರು-ನೀರು' ಎಂದು ಪರಿತಪಿಸುತ್ತಿದ್ದನು. ನಾನು ಸ್ವಲ್ಪವೂ ಅಂಜದೆ ಆತನಿಗೆ ನೀರು ತಂದು ಕೊಟ್ಟೆ. ಆತ ಹಸಿವೆಯಿಂದ ಬಳಲಿದ್ದನು. ಅವನಿಗೆ ಆಹಾರ ನೀಡಿ ಹಲವು ದಿನ ಆತನ ಶುಶ್ರೂಷೆ ನಡೆಸಿದೆ. ಆತನು ಆರೋಗ್ಯವಂತನಾಗಿ ಮರಳುವ ವರೆಗೆ ಅವನ ಸೇವೆ ಮಾಡಿದೆ.'

'ಮಗನೇ, ಮೂವರಲ್ಲಿ ನೀನೇ ಅತ್ಕುತ್ತಮನು. ನೀನು ನಿನ್ನ ಶತ್ರುವನ್ನು ಪ್ರೀತಿಸಿದೆ. ಆದ್ದರಿಂದ ವಜ್ರದುಂಗುರಕ್ಕೆ ನೀನೇ ಅರ್ಹನಾಗಿರುವೆ' ಎಂದು ಹೇಳುತ್ತಾ ಉಂಗುರವನ್ನು ಕಿರಿಯ ಮಗನಿಗೆ ನೀಡಿದನು.

٭٭َ

ہے‎ ಮರಾಸೆಯ ಫಲ

ಒಂದೂರಿನಲ್ಲಿ ಒಬ್ಬ ಬಡ ಯುವಕನಿದ್ದ. ಅವನು ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಬಂದುದರಲ್ಲೇ ತೃಪ್ತಿಯಿಂದ ಜೀವಿಸುತ್ತಿದ್ದ. ಅವನಿಗೆ ತನ್ನವರೆಂದು ಯಾರೂ ಇಲ್ಲದಿದ್ದುದರಿಂದ ರಾತ್ರಿ ಊರ ಚಾವಡಿಯಲ್ಲಿ ಮಲಗುತ್ತಿದ್ದ. ಕೆಲಸ ಸಿಗದ ದಿನ ಉಪವಾಸವಿರುತ್ತಿದ್ದ.

ಚಾವಡಿಯಲ್ಲಿ ಕೆಲವು ಮಂದಿ ಭಿಕ್ಸುಕರೂ ರಾತ್ರಿಯ ವೇಳೆ ಮಲಗಿ ಕೊಳ್ಳುತ್ತಿದ್ದರು. ಆತ ಹೊತ್ತು ಕಳೆಯಲು ಅವರೊಂದಿಗೆ ಏನಾದರೂ ಹರಟೆ ಹೊಡೆ ಯುತ್ತಿದ್ದ. ಹಾಗೆ ಹರಟೆ ಹೊಡೆಯುತ್ತಿದ್ದ ಅವನಿಗೆ ಒಂದು ವಿಷಯ ಸ್ಪಷ್ಟವಾಯಿತು. ಅದೇನೆಂದರೆ, ಭಿಕ್ಸುಕರು ತನ್ನಂತೆ ದೈಹಿಕ ಶ್ರಮವಿಲ್ಲದೆಯೇ ತನಗಿಂತ ಹೆಚ್ಚು

ದುರಾಸೆಯ ಫಲ 15

ಸುಖವಾಗಿದ್ದಾರೆ. ಅವರು ಸುಮ್ಮನೆ ನಾಲ್ಕಾರು ಮನೆ ಬಾಗಿಲಿಗೆ ಹೋಗಿ ಕೂಗಿದರೂ ಹೊಟ್ಟೆ ತುಂಬುತ್ತದೆ. ಹಾಗೆ ಯೋಚಿಸಿ ಅವನೂ ಭಿಕ್ಸೆ ಬೇಡ ತೊಡಗಿದ.

ಒಂದು ದಿನ ರಾತ್ರಿ ಚಾವಡಿಯಲ್ಲಿ ಮಲಗಿದ್ದವನಿಗೆ ಮಧ್ಯರಾತ್ರಿ ಯಾಕೋ ಎಚ್ಚರ ವಾಯಿತು. ಮೂಲೆಯೊಂದರ ಗೋಡೆಯ, ಮರೆಯಲ್ಲಿ ಯಾರೋ ಮಾತಾಡುತ್ತಿರುವ ಶಬ್ದ ಕೇಳಿಸುತ್ತಿತ್ತು. ಯುವಕ ಮೆಲ್ಲನೆ ಅತ್ತ ಸರಿದ. ಕಿವಿಗೊಟ್ಟು ಅವರ ಸಂಭಾಷಣೆ ಕೇಳ ತೊಡಗಿದ. ಅಲ್ಲಿ ಇಬ್ಬರು ವ್ಯಕ್ತಿಗಳು ಹಣ ಹಾಗೂ ಒಡವೆಗಳನ್ನು ಹಂಚಿಕೊಳ್ಳುತ್ತಿದ್ದರು. ಅವರು ಇನ್ನು ಆರು ತಿಂಗಳ ವರೆಗೆ ಸುಖವಾಗಿರುವರೆಂದು ಅವರ "ಮಾತುಗಳಿಂದ ತಿಳಿದು ಬಂತು. ಅಷ್ಟೊಂದು ಹಣ ಅವರು ಕಳ್ಳತನದಿಂದ ಸಂಪಾದಿಸಿದ್ದರು.

ಯುವಕನ ತಲೆಯಲ್ಲಿ ಇನ್ನೊಂದು ಆಲೋಚನೆ ಎದ್ದಿತು. 'ಕೂಲಿ ಕೆಲಸಕ್ಕಿಂತ ಭಿಕ್ಷೆಯೆತ್ತುವುದು ಸುಲಭವಾದರೂ, ಕಳ್ಳತನ ಮಾಡಿ ಜೀವಿಸುವುದು ಇನ್ನೂ ಹೆಚ್ಚು ಸುಖ ಕೊಡುತ್ತದೆ.' ಅಂತೆಯೇ ಕಳ್ಳತನವನ್ನೂ ಆರಂಭಿಸಿದ. ಆಶೆ ಎಂಬುದು ತುಂಬದ ಪಾತ್ರೆ. ಹೆಚ್ಚು ಸಂಪಾದಿಸಬೇಕೆಂಬ ದುರಾಸೆಯಿಂದ ಕಳ್ಳತನ ಮಾಡಿ ಕಡೆಗೆ ಒಂದು ದಿನ ಸಿಕ್ಕಿ ಬಿದ್ದ. ಜನರು ಅವನನ್ನು ಚೆನ್ನಾಗಿ ಹೊಡೆದು ಪೊಲೀಸರಿಗೆ ಒಪ್ಪಿಸಿದರು.

ಶಿಕ್ಷೆ ಅನುಭವಿಸಿ ಬಂದವನು ಮತ್ತೆ ಭಿಕ್ಷೆ ಬೇಡಲು ಹೋದಾಗ ಜನರು- 'ಕಳ್ಳ, ಖದೀಮ. ಮತ್ತೆ ಬಂದು ರಾತ್ರಿಯಲ್ಲಿ ಎಲ್ಲಿ ಕದಿಯುವುದೆಂದು ನೋಡುತ್ತಿರುವೆಯಾ? ಎಂದು ಬೈದು ಅಟ್ಟಿ ಬಿಟ್ಟರು. ಊರಲ್ಲಿ ಎಲ್ಲಿಯೂ ಅವನಿಗೆ ಒಂದೇ ಒಂದು ಹಿಡಿ وب‎ ಸಿಗಲಿಲ್ಲ.

ಭಿಕ್ಷೆ ಬೇಡಿ ಬದುಕಲು ಸಾಧ್ಯವಿಲ್ಲವೆಂದು ತಿಳಿದು ಕೂಲಿ ಕೆಲಸ ಮಾಡಿ ಬದುಕಲು ಸಿದ್ಧನಾದ. 'ಕಳ್ಳನ ಹತ್ತಿರ ಯಾರಾದರೂ ಕೆಲಸ ಮಾಡಿಸಿಕೊಳ್ಳುವುದುಂಟೇ? ಕೈಗೆ ಸಿಕ್ಕಿದ್ದನ್ನು ಕದಿಯದೆ ಬಿಟ್ಟಾನೆ? ಎಂದು ಯಾರೂ ಅವನನ್ನು ಕೂಲಿ ಕೆಲಸಕ್ಕೆ ಕೂಡಾ ಸೇರಿಸಿಕೊಳ್ಳಲಿಲ್ಲ.

ಆಗ ಆತನಿಗೆ ಒಂದು ಸತ್ಯ ತಿಳಿಯಿತು. ಒಳ್ಳೆಯ ದಾರಿಯಿಂದ ಕೆಟ್ಟ ದಾರಿಗೆ ಹೋಗುವುದು ಸುಲಭ. ಆದರೆ ಕೆಟ್ಟ ದಾರಿಯಿಂದ ಒಳ್ಳೆಯ ದಾರಿಗೆ ಬರುವುದು ಬಹಳ ಕಷ್ಟ. ಆದ್ದರಿಂದ ಅವನು ಊರನ್ನೇ ಬಿಟ್ಟು ಬೇರೆ ಊರಿಗೆ ಹೋಗಿ ಕಷ್ಟ ಪಟ್ಟು ಕೆಲಸ ಮಾಡಿ ಬದುಕಲು ಪ್ರಾರಂಭಿಸಿದ.

Ie

ಸತ್ಯಸಂಧ ಮಾಲಿ

ಒಂದೂರಿನಲ್ಲಿ ಒಬ್ಬ ತೋಟದ ಮಾಲಿ ಇದ್ದನು. ಅವನು ಬಹಳ ಪ್ರಾಮಾಣಿಕನಾಗಿದ್ದನು. ತನ್ನ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದನು. ಒಂದು ದಿನ ತೋಟದ ಯಜಮಾನನ ಮನೆಗೆ ಒಬ್ಬ ಅತಿಥಿ ಬಂದನು. ಅವನು ಅತಿಥಿ ಯನ್ನು ತೋಟಕ್ಕೆ ಕರೆ ತಂದನು. ತೋಟವು ಹಚ್ಚ ಹಸುರಾಗಿ ಕಂಗೊಳಿಸುತ್ತಿತ್ತು. ಫಲ ಪುಷ್ಪಗಳು ತುಂಬಿದ್ದುವು. ಜಲ ಸಂಚಯನಕ್ಕಾಗಿ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಾಲಿಯ ಕೆಲಸಗಳನ್ನು ಕಂಡು ಮಾಲಿಕ ಬಹಳ ಸಂತುಷ್ಟನಾದನು. ಅತಿಥಿಯ ಜೊತೆ ತೋಟವೆಲ್ಲಾ ಸುತ್ತಾಡಿದ ಬಳಿಕ ಮಾಲಿಕ ತೋಟದ ಮಾಲಿಯನ್ನು ಕರೆದು, ತನ್ನ ಅತಿಥಿಗಾಗಿ ಒಳ್ಳೆಯ ಹಣ್ಣುಗಳನ್ನು ಕಿತ್ತು ತರುವಂತೆ ಆದೇಶಿಸಿದನು. ಮಾಲಿ ಕೂಡಲೇ ಹೋಗಿ ಸ್ವಲ್ಪ ಹೊತ್ತಿನಲ್ಲೇ ಹಣ್ಣುಗಳೊಂದಿಗೆ ಬಂದನು. ಮಾಲಿಕನು ಹಣ್ಣನ್ನು ತಿಂದಾಗ ಅದು ಹುಳಿಯಾಗಿರುವುದು ಕಂಡು ಬಂತು. ಎರಡನೇ ಹಣ್ಣನ್ನು ಕತ್ತರಿಸಿದಾಗ ಅದೂ ಹುಳಿಯಾಗಿತ್ತು. ಮಾಲಿಕನು ಒಂದೊಂದೇ ಹಣ್ಣುಗಳನ್ನು ಕತ್ತರಿಸುತ್ತಾ ಹೋದನು. ಎಲ್ಲವೂ ಹುಳಿಯಾಗಿತ್ತು. ಇದರಿಂದ ಅವನಿಗೆ ಮಾಲಿಯ ಮೇಲೆ ವಿಪರೀತ ಸಿಟ್ಟು ಬಂತು. ಅವನು ಕೆಲವು ಕೆಟ್ಟ ಹಣ್ಣುಗಳನ್ನು ಕಿತ್ತು ತರುವಂತೆ ಆದೇಶಿಸಿದನು. ಮಾಲಿ ಅಲ್ಲಿಂದ ಹೋಗಿ ತನಗೆ ಗೋಚರಿಸಿದ ಕೆಲವು ಹಣ್ಣುಗಳನ್ನು ತಂದನು. ಮಾಲಿಕನು ಅದರ ರುಚಿ ಸವಿದು ನೋಡಿದಾಗ ಅದರಲ್ಲಿ ಕೆಲವು ಹುಳಿ ಮತ್ತು ಕೆಲವು ಸಿಹಿಯಾಗಿದ್ದುವು. ಅತಿಥಿಯ ಮುಂದೆ ತನಗಾದ ಅವಮಾನಕ್ಕೆ ಅವನು ಕೋಪದಿಂದ ಕಿಡಿಕಿಡಿಯಾದನು. ಅವನು ಮಾಲಿಯನ್ನು ಕರೆದು 'ಇಷ್ಟು ದಿನ ತೋಟದ ಕೆಲಸ ಮಾಡುತ್ತಿರುವ ನಿನಗೆ ಯಾವ ಮರದ ಹಣ್ಣು ಸಿಹಿಯಾಗಿದೆ ಮತ್ತು ಯಾವ ಮರದ ಹಣ್ಣು ಹುಳಿಯಾಗಿದೆ ಎಂದು ಇನ್ನೂ ಗೊತ್ತಾಗಿಲ್ಲವೇ?' ಎಂದು ಗದರಿಸಿದನು.

ಮಾಲಿ ವಿನಮ್ರನಾಗಿ ಉತ್ತರಿಸಿದನು: 'ತೋಟದ ಮೇಲ್ನೋಟ ನೋಡುವುದು ಮಾತ್ರ ನನ್ನ ಜವಾಬ್ದಾರಿ. ಅನುಮತಿಯಿಲ್ಲದೆ ಹಣ್ಣು ಸೇವನೆ ಮಾಡಲು ನಾನು ಯಾವತ್ತೂ ಬಯಸಿಲ್ಲ. ಆದ್ದರಿಂದ ಯಾವ ಮರದ ಹಣ್ಣು ಸಿಹಿಯಾಗಿದೆ ಮತ್ತು ಯಾವ ಮರದ ಹಣ್ಣು ಹುಳಿಯಾಗಿದೆ ಎಂದು ನನಗೆ ಹೇಗೆ ತಿಳಿದೀತು”

ತೋಟದ ಮಾಲಿಯ ಮಾತನ್ನು ಕೇಳಿ ಮಾಲಿಕನ ಜೊತೆ ಬಂದ ಅತಿಥಿಗೆ ಬಹಳ ಆಶ್ಚರ್ಯವಾಯಿತು; 'ಮಿತ್ರಾ! ಗುಲಾಮನನ್ನು ನನಗೆ ಮಾರುತ್ತೀಯಾ? ನೀನು ಕೇಳಿದ ಕ್ರಯ ಕೊಡುತ್ತೇನೆ' ಎಂದು ಹೇಳಿದನು. ಅದಕ್ಕೆ ಮಾಲಿಕ ಪ್ರಶ್ನಿಸಿದನು: 'ಅವನಲ್ಲಿ ಅಂತಹ ವಿಶೇಷ ಗುಣವಾದರೂ ಏನಿದೆ?' ಅದಕ್ಕೆ ಅತಿಥಿ ಉತ್ತರಿಸಿದನು-

ಸತ್ಯಸಂಧ ಮಾಲಿ 17

'ಅವನು ದೇವನ ಸತ್ಯಸಂಧರಾದ ದಾಸರಿಗೆ ಸಮಾನ. ದೇವನು ಒದಗಿಸಿ ಕೊಟ್ಟಿರುವ ಮತ್ತು ಮೇಲ್ವಿಚಾರಣೆಯ ಹೊಣೆ ವಹಿಸಿರುವ ಲೋಕವೆಂಬ ತೋಟದಲ್ಲಿ ಸತ್ಯಸಂಧರಾದವರು ಪ್ರಾಮಾಣಿ ಕರಾಗಿ ಬದುಕುತ್ತಾರೆ. ನ್ಯಾಯ-ಅನ್ಯಾಯದ ಪರಿವೆ ಇಲ್ಲದೆ ಹೊಟ್ಟೆ ಹೊರೆಯುವ ಗೊಡವೆಗೆ ಅವರು ಹೋಗುವುದಿಲ್ಲ. ಆದ್ದರಿಂದ ಒಂದು ಲಕ್ಷಕ್ಕೆ ಅವನನ್ನು ನನಗೆ ಮಾರುತ್ತೀಯಾ?'

ತೋಟದ ಮಾಲಿಕ ಹೇಳಿದನು: 'ಈಗ ನನಗೆ ನಿನ್ನ ಮಾತು ಅರ್ಥವಾಯಿತು. ಆದರೆ ನಾನು ಅವನನ್ನು ನಿನಗೆ ಮಾರಲಾರೆ.'

ಮಿತ್ರನು ಬೆಲೆಯನ್ನು ಹೆಚ್ಚಿಸುತ್ತಾ ಹೋದಂತೆ ಮಾಲಿಕ ನಿರಾಕರಿಸುತ್ತಾ ಹೋದನು. ಕೊನೆಗೆ ಹೇಳಿದನು- 'ನಾನು ಅವನನ್ನು ಈಗಾಗಲೇ ಮಾರಿದ್ದೇನೆ ಮತ್ತು ಅದರ ಬೆಲೆಯೂ ನನಗೆ ಸಿಕ್ಕಿತು.'

ಅತಿಥಿ ಆಶ್ಚರ್ಯದಿಂದ ಕೇಳಿದನು- 'ನೀನು ಅವನನ್ನು ಯಾರಿಗೆ ಮಾರಿದೆ ಮತ್ತು ಹಣವನ್ನು ಯಾರು ಕೊಟ್ಟರು?'

ಮಾಲಿಕ ಹೇಳಿದನು: 'ಅವನನ್ನು ಸ್ವತಂತ್ರಗೊಳಿಸಿದ್ದೇನೆ. ಮೂಲಕ ಅಲ್ಲಾಹನಿಗೆ ಮಾರಿದ್ದೇನೆ. ಅಲ್ಲಾಹನು ನನಗೆ ಅದರ ಪ್ರತಿಫಲವನ್ನು ಖಂಡಿತವಾಗಿಯೂ ಕೊಡುವನು.'

Ar

ಇಬ್ಬ ರು ಧನಿಕರು

ಒಂದೂರಿನಲ್ಲಿ ಇಬ್ಬರು ಧನಿಕರಿದ್ದರು. ಅವರಿಬ್ಬರೂ ಮರಣ ಹೊಂದಿದರು. ಪರಲೋಕದಲ್ಲಿ ಅಲ್ಲಾಹನ ಮುಂದೆ ಹಾಜರಾದರು. ಅಲ್ಲಾಹನು ಒಬ್ಬ ಧನಿಕನೊಂದಿಗೆ-'ನಾನು ನಿನಗೆ ತುಂಬಾ ಸಂಪತ್ತನ್ನು ನೀಡಿದ್ದೆ. ನೀನದನ್ನು ಹೇಗೆ ಖರ್ಚು ಮಾಡಿದೆ? ಎಂದು ಪ್ರಶ್ನಿಸಿದನು. ಆಗ ಆತ 'ನೀನು ನೀಡಿದ ಸಂಪತ್ತಿನಿಂದ ನಾನು ನನ್ನ ಮಕ್ಕಳು ಮರಿಗಳ ಪಾಲನೆ ಪೋಷಣೆ ಮಾಡಿದೆ. ಅವರಿಗೆ ಅತ್ಯುತ್ತಮವಾದ ಆಹಾರವನ್ನು ಒದಗಿಸಿದೆ. ಉತ್ತಮ ಉಡುಪುಗಳನ್ನು ಖರೀದಿಸಿದೆ. ಉನ್ನತ ಶಿಕ್ಷಣವನ್ನು کک‎ ನನಗಿದ್ದ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಒಬ್ಬ ಧನಿಕನ ಮಗನಿಗೆ, ನ್ನೊಬ್ಬಳನ್ನು ಮಂತ್ರಿಯ ಮಗನಿಗೆ ವಿವಾಹ ಮಾಡಿಕೊಟ್ಟೆ. ನಾನು ಮರಣ ಹೊಂದುವ be ನನ್ನ ಗಂಡು ಮಕ್ಕಳು ಬಹಳ ಆರಾಮವಾದ ಜೀವನ ನಡೆಸುತ್ತಿದ್ದರು. ನನ್ನ مم دع‎ ಬಳಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳಿದ್ದುವು. ನಾನು ನನ್ನ ಪತ್ನಿಯ ಹೆಸರಿನಲ್ಲಿ ಒಂದು ಮನೆಯನ್ನು ಕಟ್ಟಿಸಿ ಕೊಟ್ಟಿದ್ದೆ. ಅದಕ್ಕೂ ತಿಂಗಳಿಗೆ ಐದು ಸಾವಿರ ಬಾಡಿಗೆ ಸಿಗುತ್ತಿತ್ತು. ಅಲ್ಲಾಹನೇ ನೀನು ನನಗೆ ನೀಡಿದ ಎಲ್ಲ ಸಂಪತ್ತನ್ನು ನನ್ನ ಮಕ್ಕಳ ಭವಿಷ್ಯವನ್ನು ಉತ್ತಮ ಪಡಿಸಲಿಕ್ಕಾಗಿ ವ್ಯಯಿಸಿದೆ. ನನ್ನ ಬಳಿಕ ನನ್ನ ಮಕ್ಕಳು ಸುಖವಾಗಿ ಜೀವಿಸುತ್ತಿರಬಹುದೆಂದು ಭಾವಿಸುತ್ತೇನೆ.' ಅಲ್ಲಾಹನು ಎಲ್ಲವನ್ನೂ ಆಲಿಸಿದನು. ತರುವಾಯ ಧನಿಕ ವ್ಯಕ್ತಿಯೊಂದಿಗೆ- 'ನಿನ್ನ ಮರಣದ ಬಳಿಕ ನಿನ್ನ ಮನೆಯವರ ಪರಿಸ್ಥಿತಿ ಏನಾಗಿದೆ ಯೆಂದು ನೀನೀಗ ನೋಡಿದರೆ ನಿನಗೆ ದುಃ ಖವಾಗಬಹುದು' ಎಂದನು. ಬಳಿಕ ಅಲ್ಲಾಹನು ಅವನಿಗೆ ಭೂಲೋಕದಲ್ಲಿ ಅವನ ಕುಟುಂಬದ ಅವಸ್ಥೆಯನ್ನು ತೋರಿಸಿದನು. ಧನಿಕನ ಹೆಂಡತಿ ಅವನ ಮರಣಾನಂತರ ಬೇರೊಬ್ಬ ಪುರುಷನನ್ನು ವಿವಾಹವಾಗಿದ್ದಳು. ಆತ ಕೆಟ್ಟ ವ್ಯಕ್ತಿಯಾಗಿದ್ದ. ಕೆಲಸ ಮಾಡುತ್ತಿ: ರಲಿಲ್ಲ, ಸಂಪಾದಿಸುತ್ತಿರಲಿಲ್ಲ. ದಿನ ರಾತ್ರೆಗಳನ್ನು ಮನೆಯಲ್ಲೆ, ಕಳೆಯುತ್ತಿದ್ದ. ಶರಾಬು ಕುಡಿಯುತ್ತಿದ್ದ. ಯಾವಾಗಲೂ ಅಮಲಿ ನಲ್ಲಿಯೇ ಬಿದ್ದು ಕೊಂಡಿರುತ್ತಿದ್ದ. ವ್ಯಕ್ತಿಯ ಸಹವಾಸದಿಂದ ಆತನ ಪಶ್ನಿಯ ಸಂಪತ್ತು ಕೆಲವೇ ದಿನಗಳಲ್ಲಿ ಖಾಲಿಯಾಯಿತು. ಒಂದೊಂದು ತುತ್ತಿಗಾಗಿಯೂ ಆಕೆ ಪರದಾಡಬೇಕಾದ ಪರಿಸ್ಥಿತಿ ಬಂತು. ಇಂತಹ ಸಮಯದಲ್ಲಿ ವ್ಯಕ್ತಿ ಈಕೆಯನ್ನು ಬಿಟ್ಟು ಬಿಟ್ಟ. ಈಗ ಈತನ ಪತ್ನಿ روب‎ ಬೇಡಿ ಹೊಟ್ಟೆ ಹೊರೆಯುತ್ತಿದ್ದಾಳೆ. ಪತ್ನಿಯನ್ನು ಅವಸ್ಥೆಯಲ್ಲಿ ಕಂಡ ಧನಿಕ ಜೋರಾಗಿ ಅಳಲಾರಂಭಿಸಿದ. ಅಲ್ಲಾಹನು ಹೇಳಿದನು- 'ನೀನಿನ್ನು ನಿನ್ನ ಮಕ್ಕಳನ್ನು ನೋಡುವಿಯಂತೆ. ಅವನು

ಇಬ್ಬರು ಧನಿಕರು 19

ನೋಡಿದಾಗ, ಅವನ ಒಬ್ಬ ಮಗ ಜೈಲಿನಲ್ಲಿದ್ದನು. ಮತ್ತೊಬ್ಬ ಕುರುಡನಾಗಿದ್ದನು. ಹೆಣ್ಣು ಮಕ್ಕಳಿಬ್ಬರೂ ವಿಧವೆಯರಾಗಿದ್ದರು. ಅವರನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಮಕ್ಕಳನ್ನು ಅವಸ್ಥೆಯಲ್ಲಿ ಕಂಡ ಧನಿಕನ ದು:ಖ ಇಮ್ಮಡಿಸಿತು. ಅಲ್ಲಾಹನು ಆತನೊಂದಿಗೆ-'ನೀನು ನನ್ನ ಸಹಾಯನಿರೀಕ್ಟಿಸಲಿಲ್ಲ. ನಿನ್ನ ಸಂಪತ್ತಿನಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂದು ಭಾವಿಸಿದ್ದೆ. ಅದರ ಪರಿಣಾಮವನ್ನು ಈಗ ನೋಡುತ್ತಿರುವೆ' ಎಂದು ಹೇಳಿದನು.

ಅಲ್ಲಾಹನು ಎರಡನೇ ಧನಿಕನನ್ನು ಪ್ರಶ್ಲಿಸಿದ-'ನಾನು ನಿನಗೆ ನೀಡಿದ ಸಂಪತ್ತನ್ನು ಯಾವ ರೀತಿ ಖರ್ಚು ಮಾಡಿದೆ?' ಅವನು ರೀತಿ ಉತ್ತರಿಸಿದ- 'ಅಲ್ಲಾಹನೇ, ನೀನು ನನಗೆ ನೀಡಿದ ಸಂಪತ್ತನ್ನು ನಾನು ನಿನ್ನ ಮಾರ್ಗದಲ್ಲಿ ಖರ್ಚು ಮಾಡಿದೆ. ಅನಾಥರು, ವಿಧವೆಯರಿಗೆ ಸಹಾಯ ಮಾಡಿದೆ. ನಿನ್ನ ರೋಗ ಪೀಡಿತ ದಾಸರಿಗಾಗಿ ಖರ್ಚು ಮಾಡಿದೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಸಿ ಮೂಲಕ ಬಡ ಮಕ್ಕಳಿಗೆ ಧಾರ್ಮಿಕ ಜ್ಞಾನವನ್ನು ನೀಡುವ ವ್ಯವಸ್ಥೆ ಮಾಡಿದೆ. ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ಮಾಡಿದೆ. ನಿನ್ನ ಧರ್ಮವನ್ನು ಪ್ರಚಾರ ಮಾಡುವವರಿಗಾಗಿ ನನ್ನ ಹೆಚ್ಚಿನ ಸಂಪತ್ತನ್ನು ವ್ಯಯಿಸಿದೆ. ನಾನು ಮರಣ ಹೊಂದುವ ವೇಳೆ ನನ್ನ ಮಕ್ಕಳು ಕಲಿಯುತ್ತಿದ್ದರು. ಈಗ ಅವರ ಅವಸ್ಥೆ ಏನಾಗಿರಬಹುದೆಂದು ನನಗೆ ತಿಳಿದಿಲ್ಲ."

20 ವಜ್ರದುಂಗುರ

ಆಲ್ಲಾಹನು- "ನೀನು ನಿನ್ನ ಮಕ್ಕಳಿಗಾಗಿ ಏನನ್ನು ಬಟ್ಟು ಬಂದಿರುವೆ?' ಎಂದು ಪ್ರಶ್ನಿಸಿದನು. ಧನಿಕ- 'ನಾನು ನನ್ನ ಪತ್ನಿಗೆ ಮಹರ್‌ನ ರೂಪದಲ್ಲಿ ಒಂದು ಸಣ್ಣ ತೋಟವನ್ನು ನೀಡಿದ್ದೆ. ಮಕ್ಕೆಳಿಗಾಗಿ ಒಂದು ಸಣ್ಣ ಅಂಗಡಿಯನ್ನು ಬಿಟ್ಟು ಬಂದಿದ್ದೇನೆ. ನಾನು ಮರಣ ಹೊಂದುವಾಗ ನನ್ನ ಮಕ್ಕಳೊಂದಿಗೆ ಹೇಳಿದ್ದೇನೆ- ನನ್ನ ಸಂಪಾದನೆಯಿಂದ ನಿಮಗುಳಿದಿರುವುದು ಇದು ಮಾತ್ರ. ಇನ್ನು ನಾನು ನಿಮ್ಮನ್ನು ಅಲ್ಲಾಹನ ಆಶ್ರಯದಲ್ಲಿ ಬಿಟ್ಟಗಲುತ್ತಿದ್ದೇನೆ' ಎಂದು ಉತ್ತರಿಸಿದ.

ಅಲ್ಲಾಹನು- 'ನೀನು ನಿನ್ನ ಮಕ್ಕಳನ್ನು ನನ್ನ ಆಶ್ರಯದಲ್ಲಿ ಬಿಟ್ಟು ಬಂದಿದ್ದೀಯಾ, ನನ್ನ ಆಶ್ರಯ ಅವರಿಗೆ ಸಿಕ್ಕಿದೆ. ನಾನು ನಿನ್ನ ಪತ್ನಿಯ ತೋಟದಲ್ಲಿ ಸಮೃದ್ದಿಯನ್ನುಂಟು ಮಾಡಿದೆ. ನೀನು ನಿನ್ನ ಪತ್ನಿಯ ತೋಟವನ್ನೊಮ್ಮೆ ನೋಡು" ಧನಿಕ ನೋಡಿದಾಗ ಅವನ ಪತ್ನಿಯ ತೋಟ ಹಚ್ಚ ಹಸುರಾಗಿ ಹೂ, ಹಣ್ಣುಗಳಿಂದ ಸಮೃದ್ಧವಾಗಿತ್ತು. ಪ್ರತಿಯೊಂದು ಗಿಡವೂ ಹಣ್ಣುಗಳಿಂದ ತುಂಬಿತ್ತು. ಪತ್ನಿ ಸ್ವತಃ ಹಣ್ಣುಗಳನ್ನು ಕಿತ್ತು ಸಂಗ್ರಹಿಸುತ್ತಿದ್ದಳು. ತಾನೂ ತಿನ್ನುತ್ತಿದ್ದಳು. ಹಸಿದವರಿಗೆ, ಬಡವರಿಗೆ ತಿನ್ನಿಸುತ್ತಿದ್ದಳು ಮತ್ತು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಳು. ಧನಿಕ, ತನ್ನ ಪತ್ನಿಯನ್ನು ಅವಸ್ಥೆಯಲ್ಲಿ ಕಂಡು ಸಂತೃಪ್ಪನಾದ. ಅವನು ಅಲ್ಲಾಹನಿಗೆ ಸಾಷ್ಟಾಂಗವೆರಗಿ, ಅವನ ಮಹಿಮೆಯನ್ನು ಕೊಂಡಾಡಿದ.

ತರುವಾಯ ಅವನು ಮಕ್ಕಳನ್ನು ನೋಡಿದ. ಅವನು ಮಕ್ಕಳಿಗಾಗಿ ಬಿಟ್ಟು ಬಂದಿದ್ದ ಅಂಗಡಿಯ ಮುಂದೆ ಜನರು ಸರಕು ಖರೀದಿಸಲು ಸಾಲುಗಟ್ಟಿ ನಿಂತಿದ್ದರು. ಅವರು ಜನರೊಂದಿಗೆ ಆತ್ಕುತ್ತಮ ವ್ಯವಹಾರ ನಡೆಸುತ್ತಿದ್ದರು. ಸತ್ಯವನ್ನೇ ಹೇಳುತ್ತಿದ್ದರು. ಗ್ರಾಹಕರನ್ನು ಸಂತುಷ್ಟ ಗೊಳಿಸಲು ಉತ್ತಮ ವಸ್ತುಗಳನ್ನೇ ಮಾರಾಟ ಮಾಡುತ್ತಿದ್ದರು. ಸ್ವಲ್ಪ ಹಳೆಯದಾದರೂ ಮುಂಚಿತವಾಗಿ ತಿಳಿಸಿ, ಕಡಿಮೆ ಬೆಲೆಗೆ ಮಾರುತ್ತಿದ್ದರು. ಸಂಪಾದಿಸಿದ ಹಣವನ್ನು ಬಡಬಗ್ಗರಿಗೆ ಖರ್ಚು ಮಾಡುತ್ತಿದ್ದರು. ಪ್ರತಿ ವರ್ಷ ರುಕಾತ್‌ ನೀಡುತ್ತಿದ್ದರು. ಮಕ್ಕಳೆಲ್ಲರೂ ಒಟ್ಟಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ಅವರು ಧಾರ್ಮಿಕ مہوت‎ ಕೇಂದ್ರವೊಂದನ್ನೂ ಸ್ಥಾಪಿಸಿದ್ದರು.

ಇದನ್ನೆಲ್ಲಾ ನೋಡಿದ ಧನಿಕ ಸಂತುಷ್ಪನಾಗಿ ಪುನಃ ಅಲ್ಲಾಹನ ಮುಂದೆ ಸಾಷ್ಟಾಂಗವೆರಗಿದ. ಕೃತಜ್ಞತೆಯನ್ನು ಅರ್ಪಿಸಿದ. ಇದೆಲ್ಲವೂ ನಿನ್ನಿಂದಾಗಿಯೇ ಆಗಿದೆ. ನಿನ್ನ ಸಹಾಯವೇ ನಿಜವಾದ ಸಹಾಯ. ನಿನ್ನ ಆಶ್ರಯದ ಹೊರತು ಬೇರೆಲ್ಲವೂ ಪೊಳ್ಳು ಎಂದು ಹೊಗಳಿದ.

ಅಲ್ಲಾಹನು ದೇವಚರರೊಂದಿಗೆ ರೀತಿ ಆಜ್ಞಾಪಿಸಿದನು- ನನ್ನ ದಾಸನನ್ನು ಸ್ವರ್ಗಕ್ಕೆ ಕರೆದೊಯ್ಕಿರಿ. ಉನ್ನತ ಭವನಗಳಲ್ಲಿ ಇರಿಸಿರಿ ನನ್ನ ಅನುಗ್ರಹವನ್ನು ಅವನ ಮೇಲೆ ಸುರಿಸಿರಿ.

Ne

85 بہت

ಒಂದೂರಿನಲ್ಲಿ ದುಷ್ಟ ರಾಜನೊಬ್ಬನಿದ್ದನು. ಮಾತು ಮಾತಿಗೂ ಕೋಪಗೊಳ್ಳುವ ಸ್ವಭಾವ. ತನ್ನ ಇಚ್ಛೆಗೆ ವಿರುದ್ದವಾಗಿ ಯಾರಾದರೂ ಮಾತಾಡಿದರೆ ಅವರಿಗೆ ಮರಣದಂಡನೆಯನ್ನು ವಿಧಿಸುತ್ತಿದ್ದ. ಜನರು ಅವನ ಮುಂದೆ ಬರಲು ಹೆದರುತ್ತಿದ್ದರು. ಅವನ ಮುಂದೆ ಮಾತಾಡುವಾಗ ಜನರ ಕೈ ಕಾಲುಗಳು ನಡುಗುತ್ತಿದ್ದುವು. ದುಷ್ಟ ರಾಜನೆಂದೇ ಆತ ಪ್ರಸಿದ್ಧನಾಗಿದ್ದ.

ರಾಜನಿಗೆ ಪ್ರತಿನಿತ್ಯ ಕ್ಷೌರ ಮಾಡಿಸಬೇಕು. ಅದಕ್ಕಾಗಿ ಕ್ಲೌರಿಕರನ್ನು ನೇಮಿಸಿದ್ದ. ಕ್ಷೌರ ಮಾಡುವಾಗ ಕ್ಷೌರಿಕರು ಬಹಳ ಹೆದರುತ್ತಿದ್ದರು. ಅವರ ಕೈಗಳು ಕಂಪಿಸುತ್ತಿದ್ದುವು. ಎಲ್ಲಾದರೂ ಕೈ ನಡುಕದಿಂದಾಗಿ ಕ್ಷೌರ ಮಾಡುವಾಗ ರಾಜನಿಗೆ ಗಾಯವಾದರೆ, ರಕ್ತ ಬಂದರೆ ರಾಜನ ಕೋಪ ನೆತ್ತಿಗೇರುತ್ತಿತ್ತು. ಕ್ಲೌರಿಕನನ್ನು ವಧಿಸುವಂತೆ ಆಜ್ಞಾಪಿಸುತ್ತಿದ್ದ. ರೀತಿ ಅನೇಕ ಕ್ಷೌರಿಕರು ರಾಜನ ಕೋಪಕ್ಕೆ ಬಲಿಯಾಗಿ ತಮ್ಮ ಜೀವ ಕಳಕೊಂಡರು. ಹೀಗಿರಲು ಜೀವಭಯದಿಂದಾಗಿ ಯಾವ ಕ್ಲೌೇರಿಕನೂ ರಾಜನ ಕ್ಲೇರಕ್ಕೆ ಹೋಗುತ್ತಿರಲಿಲ್ಲ. ಅವನಿಂದ ಅಡಗಿ ಕೊಳ್ಳತೊಡಗಿದರು.

ಕ್ಲೇರ ಮಾಡಿಸಲು ಜನ ಸಿಗದೆ ರಾಜ ಕಂಗಾಲಾದ. ಅವನು ಕ್ಷೌರಿಕರ ನಾಯಕನಿಗೆ ಕರೆ ಕಳುಹಿಸಿದ. ಆತ ಬಂದಾಗ ಹೀಗೆ ಘರ್ಜಿಸಿದ- ಪ್ರತಿದಿನ ನನ್ನ نامع‎ ಒಬ್ಬ ಕ್ಲೌರಿಕನನ್ನು ಕಳುಹಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ನಿನ್ನನ್ನೂ, ನಿನ್ನ ಕುಟುಂಬದವರನ್ನೂ ಕೊಂದು ಬಿಡುವೆ. ರಾಜನ ಆರ್ಭಟಕ್ಕೆ ಕ್ಷೌರಿಕರ ನಾಯಕನು ತತ್ತರಿಸಿದ. ಆತ ಜೀವಭಯದಿಂದ ಕಣ್ಣೀರು ಸುರಿಸುತ್ತಾ ಮನೆಯ ಕಡೆಗೆ ನಡೆದ. ಅವನ ಮನೆಯವರೂ ನೆರೆ ಹೊರೆಯವರೂ ಅವನಿಂದ ರಾಜನ ಅಪ್ಪಣೆ ಕೇಳಿ ರೋದಿಸ ತೊಡಗಿದರು.

ಕ್ಷೌರಿಕರ ನಾಯಕನಿಗೆ ಒಬ್ಬ ಮಗನಿದ್ದ. ವಯಸ್ಸು ಸುಮಾರು ಹದಿನೈದಾಗಬಹುದು. ವಯಸ್ಸು ಚಿಕ್ಕದಾದರೂ ಚಾಣಾಕ್ಸನಾಗಿದ್ದ. ಹಾಗೆಯೇ ಧೈರ್ಯಶಾಲಿ ಕೂಡಾ. 'ಕ್ಲೌೇರ ಮಾಡುವಾಗ ಗಾಯವಾಗುವುದು, ರಕ್ತಹರಿಯುವುದು ಹೇಗೆ? ಆತ ಯೋಚಿಸಿದ. ಕೊನೆಗೆ ಅವನಿಗೆ ಒಂದು ಉಪಾಯ ಹೊಳೆಯಿತು. ಆತ ತಂದೆಯ ಬಳಿಗೆ ಹೋಗಿ-'ಅಪ್ಪಾ!' ಇಂದು ರಾಜನ ಕ್ಲೌರಕ್ಕೆ ನಾನು ಹೋಗುವೆ' ಎಂದ. ಅವನ ಮಾತಿನಲ್ಲಿ ದೃಢತೆಯಿತ್ತು. ತಂದೆಗೆ ಅವನ ಮಾತನ್ನು ನಂಬಲಾಗಲಿಲ್ಲ. ಆತ

22 ವಜ್ರದುಂಗುರ

ಮಗನನ್ನು ಅಪ್ಪಿ ಹಿಡಿದು- 'ಪ್ರಿಯ ಮಗನೆ! ನೀನು ಹೋಗುವುದು ಬೇಡ. ನೀನಿನ್ನೂ ಚಿಕ್ಕವ. ನಿನ್ನನ್ನು ದುಷ್ಟ ರಾಜ ಕೊಲ್ಲದೆ ಬಿಡಲಾರ. ನಾನು ನಿನ್ನನ್ನು ಸಾಯಲು ಬಿಡಲಾರೆ' ಎಂದು ಗೋಳಾಡಿದ. ಅವನ ಬಂದು ಮಿತ್ರಾದಿಗಳೂ ಅವನಿಗೆ ಹೋಗಬಾರದೆಂದು ಉಪದೇಶಿಸಿದರು. ಆದರೆ ಬಾಲಕ ದಿಟ್ಟ ಸ್ವರದಲ್ಲಿ ಹೀಗೆ ಉತ್ತರಿಸಿದ- 'ಪ್ರತಿಯೊಂದು ಜೀವಿಯೂ ಒಂದು ದಿನ ಸಾಯಬೇಕಾಗಿದೆ. ನಾನೇಕೆ

ುರಣಕ್ಕೆ ಅಂಜಬೇಕು? ಸಾಯುವುದೂ ಬದುಕುವುದೂ ದೇವನ ಕೈಯಲ್ಲಿದೆ. ನನಗೊಂದು ಉಪಾಯ ಹೊಳೆದಿದೆ. ದೇವನಿಚ್ಛಿಸಿದರೆ ಖಂಡಿತ ನಾನು ಯಶಸ್ವಿಯಾಗುವೆ.'

ಕೊನೆಗೆ ಎಲ್ಲರೂ ನೋಡುತ್ತಿದ್ದಂತೆಯೇ ಬಾಲಕ ರಾಜನ ಅರಮನೆಯತ್ತ ಹೆಜ್ಜೆ ಹಾಕಿದ. ತಂದೆಯ ಎದೆ ಡವಡವ ಬಡಿಯುತ್ತಿತ್ತು. ಬಾಲಕ ಕ್ಷೌರದ ಕತ್ತಿ ಮತ್ತು ಕತ್ತರಿ ಹಿಡಿದು ಕೊಂಡು ರಾಜನ ಮುಂದೆ ಪ್ರತ್ಯಕ್ಷನಾದ. ಅವನನ್ನು ನೋಡಿ ರಾಜ ಗುಡುಗಿದ- 'ನೀನು ನನ್ನ ಕ್ಷೌರ ಮಾಡುತ್ತೀಯಾ? ನೋಡು, ಒಂದು ಗಾಯವಾದರೆ, ಒಂದು ಹನಿರಕ್ತ ಹರಿದರೆ, ನಾನು ನಿನ್ನನ್ನು ಜೀವ ಸಹಿತ ಬಿಡಲಾರೆ' ಎಂದ. 'ಹೌದು, ಮಹಾರಾಜ! ಸನಗೆ ಅದೆಲ್ಲಾ ಗೊತ್ತು. ನಾನು ತಮ್ಮ ಕ್ಷೇರ ಮಾಡುವೆ' ಎಂದು ಬಾಲಕ ಉತ್ತರಿಸಿದ.

ಬಾಲ 8 23

ರಾಜನ ಸಮ್ಮತಿಯೊಂದಿಗೆ ಬಾಲಕ ಕೆಲವೇ ನಿಮಿಷಗಳಲ್ಲಿ ರಾಜನ ಕ್ಷೌರ ಮಾಡಿ ಮುಗಿಸಿದ. ಒಂದೇ ಒಂದು ಗಾಯವಾಗಲೀ ಒಂದು ಹನಿ ರಕ್ತವಾಗಲೀ ಹರಿಯಲಿಲ್ಲ. ರಾಜನಿಗೆ ಆಶ್ಚರ್ಯವೋ ಅಶ್ಚರ್ಯ! 'ನಿಜ ಹೇಳು. ಯುಕ್ತಿಯನ್ನು ಎಲ್ಲಿ ಕಲಿತೆ. ನನಗೆ ಯಾವೆ ತೊಂದರೆಯೂ ಇಲ್ಲದಂತೆ ನನ್ನ ಕ್ಷೌರ ಮಾಡಿದೆಯಲ್ಲ!' ರಾಜ ಬಾಲಕನೊಂದಿಗೆ ಕೇಳಿದ. ಬಾಲಕ ಹೀಗೆ ಉತ್ತರಿಸಿದ-

'ಮಹಾರಾಜರೇ, ತಮ್ಮ ಕ್ಲೌರಕ್ಕೆ ಬರುವವರೆಲ್ಲರೂ ತಮಗೆ ಹೆದರಿ ನಡುಗುತ್ತಿದ್ದರು. ಕ್ಷೌರ ಮಾಡುವ ಸಂದರ್ಭದಲ್ಲಿ ಅವರ ಕೈ ನಡುಗುವುದರಿಂದ ತಮಗೆ ಗಾಯವಾಗುತ್ತಿತ್ತು. ರಕ್ತ ಹರಿಯುತ್ತಿತ್ತು. ಆದರೆ ನಾನು ದೇವನ ಹೊರತು ಇನ್ನಾರಿಗೂ ಹೆದರುವುದಿಲ್ಲ. ನನ್ನ ಜೀವನ-ಮರಣಗಳೆಲ್ಲವೂ ಆತನ ಕೈಯಲ್ಲಿದೆಯೆಂದು ನಾನು ಬಲ್ಲೆ. ಆದ್ದ: ರಿಂದ ಯಾವುದೇ ಹೆದರಿಕೆಯಿಲ್ಲದೆ ತಮ್ಮ ಕ್ಷೌರ ಮಾಡಿ ಮುಗಿಸಿದೆ. ಆಕಸ್ಮಿಕವಾಗಿ ಎಲ್ಲಾದರೂ ಗಾಯಗೊಂಡು ರಕ್ತಹರಿದರೆ ಅದೇ ಕ್ಷೌರದ ಕತ್ತಿಯಿಂದ ತಮ್ಮ ಕತ್ತು ಕೊಯ್ಯುತ್ತೇನೆಂದು ನಿರ್ಧರಿಸಿದ್ದೆ. ಹಾಗಾದರೂ ತಮ್ಮ ಕಿರುಕುಳದಿಂದ ಜನರು ಪಾರಾಗಲಿ ಮತ್ತು ತಮ್ಮ ಅಕ್ರಮ ಅನ್ಕಾಯಗಳಿಂದ ಅವರಿಗೆ ಮುಕ್ತಿ ದೊರೆಯಲಿ ಎಂದು ಭಾವಿಸಿದ್ದೆ. ಧೈರ್ಯದಿಂದಾಗಿಯೇ ಕ್ಷೌರದ ಕೆಲಸವನ್ನು ಅಷ್ಟು ಸುಲಭವಾಗಿ ಮಾಡಿ ಮುಗಿಸಿದೆ. ನನ್ನ ಕಾರ್ಯದಲ್ಲಿ ನಾನು ಯಶಸ್ವಿಯಾದೆ. ಮಹಾ ರಾಜರೇ, ದೇವನನ್ನು ಭಯ ಪಡುವವರು ಬೇರಾರನ್ನೂ ಭಯಪಡುವುದಿಲ್ಲ.'

ದುಷ್ಟ ರಾಜನಿಗೆ ಬಾಲಕನ ದಿಟ್ಟ ಮಾತುಗಳನ್ನು ಕೇಳಿ ಜ್ಞಾನೋದಯವಾಯಿತು. ಬಾಲಕನಿಗೆ ಧಾರಾಳ ಬಹುಮಾನಗಳನ್ನು ನೀಡಿ, ಅವನನ್ನು ತನ್ನ ಆಸ್ಥಾನದ ಕ್ಲೌರಿಕನಾಗಿ ನೇಮಿಸಿದನು. ಕ್ರಮೇಣ ಬಾಲಕನ ದೇವಭಯ ಮತ್ತು ಸಚ್ಚಾರಿತ್ಯದಿಂದ ಪ್ರಭಾವಿತನಾಗಿ ರಾಜನಲ್ಲೂ ದೇವಭಯ ಹುಟ್ಟಿಕೊಂಡಿತು. ತನ್ನ ಅನ್ಯಾಯ-ಅಕ್ರಮಗಳನ್ನು ತೊರೆದು ಸಾತ್ಮಿಕ ಜೀವನ ಸಾಗಿಸುವ ಮೂಲಕ ಪ್ರಜೆಗಳು ನೆಮ್ಮದಿಯಿಂದ ಬದುಕುವಂತೆ ಮಾಡಿದನು.

XK

ಶ್ರೀಮಂತನ ವ್ಯಥೆ

ಒಂದೂರಿನಲ್ಲಿ ಓರ್ವ ಶ್ರೀಮಂತನಿದ್ದನು. ಲೋಕದಲ್ಲಿ ದೇವನು ಸೃಷ್ಟಿಸಿರುವ ಎಲ್ಲ ಸೊತ್ತು ಸಂಪತ್ತುಗಳನ್ನು ಗಳಿಸಿ ಸುಖವಾಗಿರಲು ಆಸೆ ಪಟ್ಟನು. ಕ್ರಮೇಣ ಸಂಪತ್ತೆ ಲ್ಲವನ್ನೂ ಗಳಿಸಿದನು. ಬಹಳ ಸುಂದರ ಮತ್ತು ವಿಶಾಲವಾದ ಅರಮನೆಯನ್ನೂ ಕಟ್ಟಿಸಿದನು. ಕಟ್ಟು ಮಸ್ತಾದ ಈರ್ವರನ್ನು ಕಾವಲು ಭಟರಾಗಿ ನೇಮಿಸಿದನು.

ಒಂದು ದಿನ ಆತನು ತನ್ನ ಬಂಧು ಮಿತ್ರಾದಿಗಳಿಗೆ ಔತಣ ಕೂಟವನ್ನು ಏರ್ಪಡಿ ಸಿದನು. ಮಂದಿ ಔತಣ ಸವಿಯುವುದನ್ನು ನೋಡಲಿಕ್ಕಾಗಿ ಒಂದು ಎತ್ತರದ ಪೀಠದಲ್ಲಿ ಕುಳಿತನು. ವೇಳೆ ತನ್ನ ಸಂಪತ್ತು ಮತ್ತು ಸೌಭಾಗ್ಯಗಳಿಂದ ಮೈಮರೆತ ಶ್ರೀಮಂತನು ಸ್ವಯಂ ಹೀಗೆಂದುಕೊಂಡನು- 'ಈ ಲೋಕದಲ್ಲಿರುವ ಸರ್ವ ಸೌಲಭ್ಯಗಳನ್ನೂ ನಾನು ಗಳಿಸಿರುವೆ. ಆದ್ದರಿಂದ ನಾನು ನಿಸ್ಸಂಕೋಚವಾಗಿ ಎಲ್ಲ ಸೌಲಭ್ಯಗಳನ್ನು ಸುಖವಾಗಿ ಬಳಸುತ್ತೇನೆ. ಹೀಗೆ ಆಲೋಚಿಸುತ್ತಿರುವಾಗ, ಕಂಕುಳಲ್ಲಿ ಗೋಣಿಯನ್ನು ಹಿಡಿದು, ಚಿಂದಿ ಬಟ್ಟೆ ಧರಿಸಿದ್ದ ಓರ್ವ ہجوب‎ ಬಾಗಿಲ ಬಳಿ ನಿಂತಿರುವುದು ಆತನಿಗೆ ಕಾಣಿಸಿತು. ಭಿಕ್ಷುಕ ಅರಮನೆಯ ಬಾಗಿಲನ್ನು ಬಲವಾಗಿ ಗುದ್ದಿದ. ಶಬ್ದದಿಂದ ಔತಣ ಕೂಟದಲ್ಲಿದ್ದವರೆಲ್ಲರೂ ಬೆಚ್ಚಿ ಬಿದ್ದರು.

ಶ್ರೀಮಂತನ ವ್ಯಥೆ 25

ದ್ವಾರಪಾಲಕರು ಕೋಪದಿಂದ ಆತನ ಬಳಿಗೋಡಿದರು. ಆತ ಗಂಭೀರ ಸ್ವರದಲ್ಲಿ- 'ನಿಮ್ಮ ಯಜಮಾನನನ್ನು ತಕ್ಷಣ ಹೊರಬರಲು ಹೇಳಿ, ನನಗೆ ಆತನನ್ನು ನೋಡಬೇಕಾಗಿದೆ" ಎಂದು ಹೇಳಿದನು. 'ನಿನಗೆ ಇಲ್ಲಿ ಏನು ಕೆಲಸ?' ದ್ವಾರಪಾಲಕರು ಗುಡುಗಿದರು. ತನ್ಮಧ್ಯೆ ಶ್ರೀಮಂತನು ತನ್ನ ಭಟರೊಡನೆ- ಆತನನ್ನು ಹಿಡಿದು ಹೊರದಬ್ಬುವಂತೆ ಆಜ್ಞಾಪಿಸಿದ. ಆದರೆ ವ್ಯಕ್ತಿ ಸ್ವಲ್ಪವೂ ಹಿಂಜರಿಯದೆ ಪುನಃ ಜೋರಾಗಿ ಬಾಗಿಲಿಗೆ ಬಡಿದನು. ಅರಮನೆಯ ಒಳೆಗಿದ್ದವರು ಧಿಗ್ಗನೆ ಎದ್ದು ನಿಂತರು. ಆತನ ಬಾಗಿಲು ತಟ್ಟುವಿಕೆಯು ಅಷ್ಟೊಂದು ಕರ್ಕಶವಾಗಿತ್ತು. ತನ್ನತ್ತ ಧಾವಿಸಿ ಬಂದವರೊಡನೆ- 'ಅಲ್ಲೇ ನಿಲ್ಲಿರಿ, ನಾನು ಮೃತ್ಯು ದೇವಚರ' ಎಂದು ಹೇಳಿದ. ಇದನ್ನು ಕೇಳಿದವರೆಲ್ಲರೂ ಕದಲಲಾಗಡದೆ ನಿಂತು ಬಿಟ್ಟರು. ಶ್ರೀಮಂತನು ತನ್ನ ಸೇವಕರೊಡನೆ- 'ಅದಕ್ಕೆ ಬದಲಾಗಿ ಬೇರೇನು ನೀಡಿದರೆ ಆತ ಮರಳುವನೆಂದು ಪ್ರಶ್ಲಿಸಿರಿ' ಎಂದು ಹೇಳಿ ಕಳಿಸಿದನು. ಆಗ ಆಗಂತುಕ ಹೀಗೆಂದ- 'ನಿನ್ನನ್ನು ಹಿಡಿದೊಯ್ಕಲಿಕ್ಕಾಗಿ ಬಂದಿದ್ದೇನೆ. ನಿನ್ನನ್ನು ಸುಖ ಸಂಪತ್ತುಗಳಿಂದ ಬೇರ್ಪಡಿಸುತ್ತೇನೆ. ನೀನು ಏನು ಕೊಟ್ಟರೂ ಪ್ರಯೋಜನವಿಲ್ಲ.' ಭಯ, ದುಃಖ ಮತ್ತು ನಿರಾಶೆಯಿಂದ ಶ್ರೀಮಂತ ಚಡಪಡಿಸಿದ.

'ಎಲೈೆ ಶಾಪ ಪೀಡಿತ ಹಣವೇ. ಪರಮೋನ್ನತನಾದ ದೇವನನ್ನು ಆರಾಧಿಸದಂತೆ ನೀನು ನನ್ನನ್ನು ದಾರಿ ತಖ್ಪಿಸಿದೆ. ನನಗೆ ನೀನೇ ಸಾಕೆಂದು ಭಾವಿಸಿದೆ. ಆದರೆ ಇಂದು ನೀನು ಅದರ ದುಃಖ ಸಂಕಟವಾಗಿ ಮಾರ್ಪಟ್ಟಿರುವೆ. ನಾನಿದೋ ಬರಿಗೈಯಿಂದ ಹೋಗುತ್ತೇನೆ. ನೀನು ನನ್ನ ವೈರಿಗಳಿಗಾಗಿ ಇಲ್ಲಿಯೇ ಉಳಿಯುತ್ತೀ.'

ವೇಳೆ ಅಲ್ಲಾಹನು ಸಂಪತ್ತಿಗೆ ಮಾತಾಡುವ ಶಕ್ತಿ ಕೊಟ್ಟನು. ಅದು ಹೀಗೆಂದಿತು- 'ನೀನು ನನ್ನನ್ನು ಯಾಕೆ ಹಳಿಯುತ್ತಿರುವೆ? ನೀನು ನಿನ್ನನ್ನೇ ಶಪಿಸು. ಅಲ್ಲಾಹನು ನಿನ್ನನ್ನೂ ನನ್ನನ್ನೂ ಮಣ್ಣಿನಿಂದಲೇ ಸೃಷ್ಟಿಸಿದನು. ತರುವಾಯ ನನ್ನನ್ನು ನಿನ್ನ ವಶಕ್ಕೆ ಕೊಟ್ಟನು. ಏತಕ್ಕಾಗಿ? ಪರಲೋಕಕ್ಕೆ ಅಗತ್ಯವಿರುವುದನ್ನು ನೀನು ನನ್ನಿಂದ ಸಾಧಿಸಲಿಕ್ಕಾಗಿ. ನಿರ್ಗತಿಕರಿಗೂ, ಅನಾಥರಿಗೂ ದಾನ ನೀಡಲಿಕ್ಕಾಗಿ. ಮಸೀದಿ, ಸೇತುವೆ ಮತ್ತು ತಂಗುದಾಣಗಳೆ ನಿರ್ಮಾಣಕ್ಕಾಗಿ. ನೀನು ಹೀಗೆಲ್ಲಾ ಮಾಡುತ್ತಿದ್ದರೆ ಪರಲೋಕದಲ್ಲಿ ನಿನ್ನ ಕೈ ಹಿಡಿದು ಬೆಂಬಲಿಸುತ್ತಿದ್ದೆ. ಆದರೆ ನೀನು ನಿನ್ನ ಸ್ವಂತ ವಿಷಯಗಳಿಗಾಗಿ ನನ್ನನ್ನು ಖರ್ಚು ಮಾಡಿದೆ. ನಿನ್ನ ಸ್ವಂತ ಸುಖಕ್ಕಾಗಿ ನನ್ನನ್ನು ಬಚ್ಚಿಟ್ಟು ಕಾವಲುಗಾರರನ್ನು ನೇಮಿಸಿದೆ. ಇಂದು ನೀನು ನನ್ನನ್ನು ನಿನ್ನ ವೈರಿಗಳಿಗೆ ಬಿಟ್ಟು ಹೊರಟಿರುವೆ. ನೀನು ಅತ್ತು ಕೂಗಿ ಪ್ರಯೋಜನವಿಲ್ಲ. ಇದಕ್ಕೆ ನಾನು ಹೊಣೆಯಲ್ಲ.'

ಕ್ಷಣಾರ್ಧದಲ್ಲಿ ಮೃತ್ಯು ದೇವಚರ ಶ್ರೀಮಂತನ ಪ್ರಾಣವನ್ನು ಹಿಡಿಯಿತು. ಆತ ಪೀಠದಿಂದ ಕೆಳಗುರುಳಿದ.

ان

KY

ಒಲದು ದಿನ ಮಸೀದಿಯಿಂದ ಮನೆಗೆ ಮರಳುತ್ತಿದ್ದೆ. ನನ್ನ ಮುಂದೆ ಕಾರೊಂದು ಬಂದು ನಿಂತಿತು. ಕೂಡಲೇ ಭಿಕ್ಷುಕನೊಬ್ಬ ಕಾರಿನ ಬಳಿಗೆ ಓಡಿ ಬಂದು ನಿಂತ. ಕಾರಿನೊಳಗಿದ್ದ ವ್ಯಕ್ತಿ ಓರ್ವ ಶ್ರೀಮಂತನಿರಬೇಕು. ಯಾವುದೋ ಕಾರ್ಯದ ನಿಮಿತ್ತ ಆತ ಕಾರಿನ ಹೊರಗಡೆ ತಲೆ ಹಾಕಿದಾಗ ಭಿಕ್ಷುಕ ಕೂಡಲೇ ಆತನ ಬಳಿ ಹೋಗಿ ಕೈ ಚಾಚಿದ. ಶ್ರೀಮಂತ ವ್ಯಕ್ತಿ ಭಿಕ್ಷುಕನನ್ನು ಅಡಿಯಿಂದ ಮುಡಿಯವರೆಗೂ ನೋಡಿದ- 'ಗಟ್ಟಿಮುಟ್ಟಾದ ಶರೀರ. ತುಂಬು ಯೌವನ. ಆದರೂ وب‎ ಬೇಡುವೆಯಾ. ನಾಚಿಕೆಯಾಗುವುದಿಲ್ಲವೆ ನಿನಗೆ? ಎಂದು ಗದರಿಸಿದ.

'ಧನಿಗಳೇ! ನಾನು ತುಂಬಾ ಬಡವ. ದೇವನ ಹೆಸರಿನಲ್ಲಿ ಏನಾದರೂ ಕೊಡಿ' ಎಂದು ಮಾಮೂಲಿನಂತೆ ಅಂಗಲಾಚಿದ.

ಭಿಕ್ಷುಕ 27

'ನೀನು ಬಡವನಾ! ದೇವನು ನಿನಗೆ ಕೈ, ಕಾಲು, ಕಣ್ಣು, ಕಿವಿ ಮತ್ತು ದಷ್ಟಪುಷ್ಟ ಶರೀರವನ್ನು ನೀಡಿದ್ದಾನೆ. ಆದರೂ ಬಡವನೆಂದು ಹೆಳಿ ಕೊಳ್ಳುತ್ತೀಯಾ? ಬಡವ ನಾನು. ನನ್ನ ಕೈ ಕಾಲು ಮತ್ತು ಕಣ್ಣನ್ನು ನೋಡು" ಎನ್ನುತ್ತಾ ನಿಶ್ಚಲ ಸ್ಥಿತಿಯಲ್ಲಿರುವ ತನ್ನ ಕೈ, ಕುಂಟು ಕಾಲು ಮತ್ತು ಕೃತಕ ಕಣ್ಣನ್ನು. ಭಿಕ್ಷುಕನಿಗೆ ತೋರಿಸಿದ.

ಭಿಕ್ನುಕೆ ಏನೂ ಮಾತಾಡಲಿಲ್ಲ. ಆಗ ಶ್ರೀಮಂತ ವ್ಯಕ್ತಿ ಆತನೊಡನೆ- 'ನೋಡಪ್ಪಾ! ಹತ್ತು ಸಾವಿರ ರೂಪಾಯಿ ಕೊಡುತ್ತೇನೆ. ನಿನ್ನ ಒಂದು ಕಾಲನ್ನು ನನಗೆ ಕೊಡುತ್ತೀಯಾ?' ಎಂದು ಪ್ರಶ್ನಿಸಿದ. ಬಿಕ್ಷುಕ ಆಗಲೂ ಮಾತಾಡಲಿಲ್ಲ.

"ಇಪ್ಪತ್ತು ಸಾವಿರ ಕೊಡುತ್ತೇನೆ. ನಿನ್ನ ಒಂದು ಕೈಯನ್ನು ಕತ್ತರಿಸಿ ಕೊಡು' ಶ್ರೀಮಂತ ಪುನ: ಹೇಳಿದ. |

ಆಗಲೂ ಭಿಕ್ಷುಕ ಮೌನ ವಹಿಸಿದ.

'ಹಾಗಾದರೆ ನಲ್ವತ್ತು ಸಾವಿರ ರೂಪಾಯಿ ಕೊಡುತ್ತೇನೆ. ನಿನ್ನ ಒಂದು ಕಣ್ಣನ್ನು ನನಗೆ ಕೊಡುವೆಯಾ? ಎನ್ನುತ್ತಾ ಆತ ಭಿಕ್ಷುಕನಿಗೆ ಆಮಿಷ ತೋರಿಸಿದ.

ಯಾರಾದರೂ ಹಣದಾಸೆಗಾಗಿ ತನ್ನ ಶರೀರದ ಅಂಗಾಂಗಗಳನ್ನು ಕಳೆದುಕೊಳ್ಳಲು ಸಿದ್ಧರಾಗುವರೇ? ಭಿಕ್ಷುಕ ತುಟಿ ಬಿಚ್ಚದೆ ತಲೆ ತಗ್ಗಿಸಿ ನಿಂತು ಬಿಟ್ಟಿ.

'ಇಗೋ! ಒಂದು ರೂಪಾಯಿ ತೆಗೆದುಕೋ. ಪ್ರವಾದಿ ಮುಹಮ್ಮದ್‌ರವರ(ಸ) ವಚನವೊಂದನ್ನು ನೆನಪಿಡು. ಪ್ರವಾದಿ(ಸ) ಹೇಳಿದರು- ಅಲ್ಲಾಹನು ಯಾರನ್ನು ಅವಮಾನಗೊಳಿಸ ಬಯಸುತ್ತಾನೋ ಅವನಿಂದ ಭಿಕ್ಷೆ ಬೇಡಿಸುತ್ತಾನೆ.'

ಮೌನವಾಗಿದ್ದ ಭಿಕ್ಷುಕ ರೂಪಾಯಿಯನ್ನು ಸ್ವೀಕರಿಸದೆ ಹಾಗೆಯೇ ಅಲ್ಲಿಂದ ಹೊರಟು ಹೋದ. ಕಾಲ ಉರುಳಿತು. ಒಂದು ದಿನ ನಾನು ಕಚೇರಿಗೆ ಹೋಗುತ್ತಿದ್ದ ದಾರಿಯಲ್ಲಿ ಹೊಸ ಮನೆಯೊಂದು ನಿರ್ಮಾಣ ವಾಗುತ್ತಿತ್ತು. ಅಂದು وب‎ ಬೇಡುತ್ತಿದ್ದ ಅದೇ ವ್ಯಕ್ತಿ ಇಟ್ಟಿಗೆ ಕಲ್ಲು ಹೊರುತ್ತಿರುವುದನ್ನು ಕಂಡು ಅವನ ಬಳಿಗೆ ಹೋದೆ. ನಾವು ಪರಸ್ಪರ ಸಲಾಮ್‌ನ ವಿನಿಮಯ ಮಾಡುತ್ತಾ ಮುಗುಳ್ಗ್ನಕ್ಕೆವು. ನಾನು ಅವನೊಡನೆ, ನಿನಗೆ ದಿನಕ್ಕೆ ಎಷ್ಟು ಕೂಲಿ ಸಿಗುತ್ತದೆಂದು ವಿಚಾರಿಸಿದೆ.

ನಾನು ಗುತ್ತಿಗೆಯ ಆಧಾರದಲ್ಲಿ ಕೆಲಸ ಮಾಡಿ ದಿನಕ್ಕೆ ನೂರು ರೂಪಾಯಿ ಸಂಪಾದಿಸುತ್ತೇನೆದು ವ್ಯಕ್ತಿ ಉತ್ತರಿಸಿದ.

28 ವಜ್ರದುಂಗುರ

'ಭಿಕ್ಷೆ ಬೇಡಿ ಅವಮಾನಿತನಾಗುವುದಕ್ಕಿಂತ ಉದ್ಯೋಗ ಉತ್ತಮ ವಲ್ಲವೆ?' ನಾನು ಕೇಳಿದೆ. 'ಹೌದು, ಅಲ್ಲಾಹನಿಗೆ ಸ್ತುತಿ. ಆತನು ನನಗೆ ಗಟ್ಟಿಮುಟ್ಟಾದ ಶರೀರ ಮತ್ತು ಆರೋಗ್ಯ ದಯಪಾಲಿಸಿದ್ದಾನೆ. ಈಗ ನಾನು ಬಡವನೆಂದು ನನಗನಿಸುವುದಿಲ್ಲ. ಅಂದು ನಾನು ಕಾರಿನ ಬಳಿ ಭಿಕ್ಸೆಗೆ ಕ್ಕೆ ಚಾಚುತ್ತಿದ್ದಾಗ ನೀವೂ ಅಲ್ಲಿದ್ದಿರಲ್ಲವೆ? ಕುಂಟ ಶ್ರೀಮಂತ ವ್ಯಕ್ತಿ ನನ್ನ ಕಣ್ಣು ತೆರೆಸಿದರು. ಪ್ರವಾದಿ ಮುಹಮ್ಮದ್‌ರ(ಸ) ಎಚ್ಚರಿಕೆಯ ಮಾತನ್ನು ಹೇಳಿ ನನ್ನ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ಆದುದರಿಂದ ನಾನು ಈಗ ಕೆಲಸ ಮಾಡಿ ಸಂಪಾದಿಸಿ ಅಭಿಮಾನದೊಂದಿಗೆ ಜೀವಿಸುತ್ತಿದ್ದೇನೆ. ಮನೆ ಮಂದಿಯ ಜೊತೆ ಸಂತೋಷದಲ್ಲಿದ್ದೇನೆ' ಎಂದು ಹೇಳಿ ಆತ ತನ್ನ ಕೆಲಸದಲ್ಲಿ ಮಗ್ನನಾದ.

Ark

ಕನಸು

ಅದೊಂದು ಹುಣ್ಣಿಮೆಯ ರಾತ್ರಿ. ಹಾಸಿಗೆಯಲ್ಲಿ ಮಲಗಿದ್ದೆ. ನಿದ್ದೆಯ ಮಂಪರು ಹತ್ತಿತ್ತಷ್ಟೆ. ಆಗಲೇ ಕಿವಿಗೆ ಪಿಸು ಮಾತುಗಳು ಕೇಳಿಸಲಾರಂಭಿಸಿತು. ಗಮನಕೊಟ್ಟು ಆಲಿಸಿದೆ. ನನ್ನ ದೇಹದ ಅಂಗಾಂಗಗಳೇ ಪರಸ್ಪರ ಮಾತಾಡುತ್ತಿದ್ದುವು. ಕೈ ಇತರ ಅವಯವಗಳಿಗೆ ಹೇಳುತ್ತಿತ್ತು- 'ಸ್ನೇಹಿತರೆ! ವ್ಯಕ್ತಿಯಿದ್ದಾನಲ್ಲ. ನಾನು ಇವನ ಕೈ, ಈತನಿಗೆ ದೇವನು ಸ್ವಲ್ಪ ಅಧಿಕಾರ ಕೊಟ್ಟಿದ್ದಾನೆ. ಆದರೆ ತನ್ನ ಸ್ವೇಚ್ಛೆಯಿಂದಾಗಿ ಅವನು ನಿಯಂತ್ರಣ ತಪ್ಪಿದ್ದಾನೆ. ದೇವನನ್ನು ಮರೆತು ಅಹಂಕಾರ ತೋರುತ್ತಿದ್ದಾನೆ. ದೇವನು ನನ್ನನ್ನು ಅವನ ಅಧೀನಕ್ಕೊಪ್ಪಿಸಿದ್ದಾನೆ. ಇವನು ನನ್ನನ್ನು ಬಳಸಿ ಬಡಬಗ್ಗರಿಗೆ ದಾನಧರ್ಮ ಮಾಡಬೇಕಾಗಿತ್ತು. ಆದರೆ ಇವನು ಜನರಿಂದ ಹಣ ಸುಲಿಯುತ್ತಿದ್ದಾನೆ. ದುರ್ಬಲರಿಗೆ ಹೊಡೆಯುತ್ತಾನೆ. ಜನರನ್ನು ಬಯ್ಯ್ಕುತ್ತಾನೆ. ಅಶ್ಲೀಲ ಹಾಡುಗಳನ್ನು ಬರೆದು ಹಂಚುತ್ತಿದ್ದಾನೆ. ಇವನು ಬಹಳ ದುಷ್ಟ. ನಾನಂತೂ ಇವನಿಂದ ಬೇಸತ್ತಿದ್ದೇನೆ.'

ಕೈ ಮಾತಾಡುವುದನ್ನು ನಿಲ್ಲಿಸಿದಾಗ ಕಾಲುಗಳು ಹೇಳಲಾರಂಭಿಸಿದುವು- 'ಹೌದು ಮಿತ್ರಾ! ಇವನು ಹಾಗೆಯೇ. ನಾನು ಕೂಡಾ ಇವನ ಬಗ್ಗೆ ಜಿಗುಪ್ಸೆ ಹೊಂದಿದ್ದೇನೆ. ಅಲ್ಲಾಹನು ನಮ್ಮನ್ನು ಇವನ ಅಧೀನಗೊಳಿಸಿದ್ದಾನೆ. ಇವನು ಮಸೀದಿಗೆ ಹೋಗಬೇಕಿತ್ತು. ಪುಣ್ಮಕಾರ್ಯಗಳಿಗಾಗಿ ಓಡಾಡಬೇಕಿತ್ತು. ಆದರೆ ಈತನಿಗೆ ಕೆಟ್ಟ ಆಟಗಳೇ ಬೇಕು. ಅಡ್ಡಗಾಲು ಹಾಕಿ ಹುಡುಗರನ್ನು ಬೀಳಿಸುತ್ತಾನೆ. ಬಹಳ ಕೆಟ್ಟವ:'

ಕಾಲುಗಳು ಮೌನವಾದೊಡನೆ ಕಣ್ಣು ಹೇಳತೊಡಗಿತ್ತು- 'ಹೌದವ್ಪಾ! ಅವನು ಹಾಗೆಯೇ! ನೋಡಿ! ಅವನ ಮುಖದಲ್ಲಿ ದೇವನು ನನ್ನನ್ನು ಹೇಗೆ ಜೋಡಿಸಿದ್ದಾನೆ. ನನ್ನಿಂದಾಗಿ ಈತ ಎಷ್ಟು ಸುಂದರವಾಗಿ ಕಾಣುತ್ತಾನೆ. ಸೋದರರಾದ ಕೈಕಾಲುಗಳೇ! ನೀವು ನಿಜವನ್ನೇ ಹೇಳಿದ್ದೀರಿ. ದೇವನು ಇವನಿಗೆ ನಮ್ಮ ಮೇಲೆ ಸ್ವಲ್ಪ ಅಧಿಕಾರ ಕೊಟ್ಟಿದ್ದಾ ನೆಂಬುದು ನಿಜ ಆದರೆ ಈತ ತನ್ನ ನಿಯಂತ್ರಣ ತಪ್ಪಿದ್ದಾನೆ. ನಮ್ಮನ್ನು ಬಳಸಿ ಈತ ದೇವಗ್ರಂಥ ಮತ್ತು ಪ್ರವಾದಿ ವಚನಗಳು ಹಾಗೂ ಉತ್ತಮ ಸಾಹಿತ್ಯಗಳನ್ನು ಓದಬೇಕಿತ್ತು. ಆದರೆ

30 ವಜ್ರದುಂಗುರ

ಈತ ಅಶ್ಲೀಲ ಸಾಹಿತ್ಯ ಓದುತ್ತಾನೆ. ನಾಚಿಕೆಯಿಲ್ಲದೆ ಹುಡುಗಿಯರನ್ನು ಚುಡಾಯಿಸುತ್ತಾನೆ. ಅರೆನಗ್ನ ನೃತ್ಯ ಗಾಯನಗಳನ್ನು ನೋಡುತ್ತಾನೆ. ಇವನು ತುಂಬಾ ಕೆಟ್ಟವ. ನನಗೆ ತುಂಬಾ ಬೇಸರವಾಗಿದೆ.'

ಕಣ್ಣಿನ ಮಾತುಗಳನ್ನು ಅಲ್ಲಿಗೇ ತಡೆದು ಕಿವಿ ಮಾತಿಗಾರಂಭಿಸಿತು- 'ಸ್ನೇಹಿತರೇ! ನನಗೂ ನಿಮ್ಮ ಪರಿಸ್ಥಿತಿಯೇ ಎದುರಾಗಿದೆ. ಒಳ್ಳೆಯ ಮಾತುಗಳು ನನ್ನೊಳಗೆ

ಪ್ರವೇಶಿಸುವುದಕ್ಕೆ ಮುಂಚೆಯೇ ಇವನು ಬೆರಳುಗಳನ್ನು ಕಿವಿಯೊಳಗೆ ತುರುಕಿಸುತ್ತಾನೆ. ಆದರೆ ಕೆಟ್ಟ ಮಾತುಗಳು, ಅಶ್ಲೀಲ ಬೈಗುಳಗಳು ಹಾಗೂ ಸುಳ್ಳು ಮಾತುಗಳನ್ನು ಕೇಳುವುದೆಂದರೆ ಇವನಿಗೆ ಬಹಳ ಇಷ್ಟ.'

ಕಿವಿಯ ಮಾತು ನಿಲ್ಲುವಾಗಲೇ' ಹೊಟ್ಟೆ ಕೂಗಿ ಕರೆಯಿತು- 'ಸೋದರರೇ! ಸ್ವಲ್ಪ ನನ್ನೆಡೆಗೆ ಗಮನ ಹರಿಸಿರಿ. ನಾನು ನಿಮ್ಮೆಲ್ಲರಿಗಿಂತಲೂ ಇವನಿಗೆ ಹೆದರುತ್ತಿದ್ದೇನೆ. ಹಗಲಿರುಳೂ ನನ್ನಲ್ಲಿ ಅಗ್ನಿ ತುಂಬಿಕೊಳ್ಳುತ್ತಾನೆ. ಹರಾಮ್‌, ಹಲಾಲ್‌ನ ಪರಿವೆಯೇ

ಕನಸು 31

ಇವನಿಗಿಲ್ಲ. ಕದಿಯುವುದು, ಇತರರ ವಸ್ತುಗಳನ್ನು ಕಸಿಯುವುದು, ಮೋಸಗೊಳಿಸುವುದು ಇತ್ಕಾದಿ ಇವನ ಮಾಮೂಲಿ. ಅವುಗಳಿಂದ ಸಂಪಾದಿಸಿದ ವಸ್ತುಗಳನ್ನೇ ನನ್ನಲ್ಲಿ ತುಂಬುತ್ತಾನೆ. ಇವನಿಗೆ ದೇವಭಯವೇ ಇಲ್ಲ.

ಹೊಟ್ಟೆ ತನ್ನ ದುಃಖವನ್ನು ತೋಡಿಕೊಂಡ ಬಳಿಕ ಮನ-ಮಸ್ತಿಷ್ಯಗಳು ಜಾಗೃತಗೊಂಡವು. ಅವು ಕೂಡಾ ಇಂತಹದೇ ಹೇಳಿಕೆ ನೀಡಿದುವು- 'ಕೆಟ್ಟ ವಿಚಾರಗಳನ್ನೇ ಪೋಷಿಸಿ ಬೆಳೆಸುವುದು ಇವನ ಚಾಳಿ, ಒಳ್ಳೆಯ ವಿಚಾರಗಳು ಇವನಿಗೆ ಹೊಳೆಯುವುದೇ ಇಲ್ಲ."

ಇದುವರೆಗೂ ಮೌನವಾಗಿದ್ದ ಹರಿತವಾದ ನಾಲಿಗೆ ಹೀಗೆ ಹೇಳಿತು- 'ಹಾಗಾದರೆ ರೀತಿ ಎಲ್ಲರೂ ದುಃಖಿಸುವುದರಿಂದೇನು ಪ್ರಯೋಜನ? ಏನಾದರೊಂದು ತೀರ್ಮಾನ ಕೈಗೊಳ್ಳೋಣ. ಮನ-ಮಸ್ತಿಷ್ಯಗಳೇ! ನೀವು ನಮ್ಮ ಮಧ್ಯೆ ಅತಿ ಬುದ್ಧಿವಂತರಾಗಿದ್ದೀರಿ. ನಿಮ್ಮ ಸಲಹೆಯೇನು ತಿಳಿಸಿ.'

ನಾಲಗೆಯು ರೀತಿ ಚಟಾಕಿ ಹಾರಿಸಿದ ಕೂಡಲೇ ಹೃದಯವು ಮೆದುಳಿನ ಕಡೆಗೆ ನೋಡಿತು. ಮೆದುಳು ನಾಲಗೆಯ ಕಡೆಗೆ ಸನ್ನೆ ಮಾಡಿತು. ಆಗ ನಾಲಗೆಯು- 'ಧಿಕ್ಕಾರ, ಧಿಕ್ಕಾರ' ಎಂದು ಘೋಷಿಸಿತು. ಅದರ ಜೊತೆಗೆ ಎಲ್ಲ ಅಂಗಾಂಗಗಳೂ ಸ್ವಬ್ಧವಾದುವು. ಎಲ್ಲವೂ ತಂತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದುವು.

ನಿಶ್ಛಬ್ದ ವಾತಾವರಣದಲ್ಲಿ ನನ್ನ ಮುಂದೆ ಕತ್ತಲು ಕವಿಯಿತು. ಕಣ್ಣರಳಿಸಿ ನೋಡಿದರೂ ಏನೂ ಗೋಚರಿಸುತ್ತಿರಲಿಲ್ಲ. ಕೈಯಿಂದ ಸಹಾಯ ಪಡೆಯೋಣ ವೆಂದು ಪ್ರಯತ್ನಿಸಿದೆ. ಅದೂ ನನ್ನಿಂದ ಮುನಿಸಿಕೊಂಡು ನಿಶ್ವಲವಾಗಿತ್ತು. ಕಾಲುಗಳನ್ನಾದರೂ ಸರಿ ಮಾಡೋಣವೆಂದು ಬಲ ನೀಡಲು ಪ್ರಯತ್ನಿಸಿದೆ. ಆದರೆ ಅವು ಸತ್ತು ಹೋಗಿವೆಯೋ ಎಂದೆನಿಸಿತು. ತಂದೆಯನ್ನು ಕೂಗಿ ಕರೆಯಲು ಪ್ರಯತ್ನಿಸಿದೆ. ಆದರೆ ನಾಲಗೆಯು ಚಲಿಸುತ್ತಲೇ ಇರಲಿಲ್ಲ. ಜೋರಾಗಿ ಮೂಗಿನಿಂದ ಶ್ವಾಸೋಚ್ಛ್ಚ್ಯಾಸ ಮಾಡಲು ಯತ್ನಿಸಿದೆ. ಅದರ ಶಬ್ದದಿಂದಲಾದರೂ ಅವರು ಸಹಾಯಕ್ಕೆ ಬರಬಹುದೆಂದು ಭಾವಿಸಿದೆ. ಆದರೆ ಆಗ ನನಗೆ ಉಸಿರೇ ಬರುತ್ತಿರಲಿಲ್ಲ. ರೀತಿ ನನ್ನ ದೇಹದ ಅಂಗಾಂಗಗಳೆಲ್ಲವೂ ನಿಷ್ಪ್ರಯೋಜಕ ವಾಗಿತ್ತು. ಕಟ್ಟಕಡೆಗೆ ನನ್ನ ಆಲೋಚಿಸುವ ಶಕ್ತಿ ಕೂಡಾ ಹೊರಟು ಹೋಗಿತ್ತು.

ಅಷ್ಟರಲ್ಲಿ ಕಣ್ಣು ತೆರೆಯಿತು. ಅಬ್ಬಾ! ಇನ್ನೊಮ್ಮೆ ಹುಟ್ಟಿ ಬಂದ ಅನುಭವವಾಯಿತು. ಇದುವರೆಗೂ ಕಂಡದ್ದು, ಕೇಳಿದ್ದು ಮಾತಾಡಿದ್ದೆಲ್ಲವೂ ಕನಸೆಂದು ಆಗ ಮನವರಿಕೆಯಾಯಿತು. ನಿಜವಾಗಿಯೂ ಅಲ್ಲಾಹನು ನನ್ನ ಕೈಕಾಲು, ಕಣ್ಣು, ಕಿವಿ ಮನ-ಮಸ್ತಿಷ್ಠವೇ ಮೊದಲಾದ ಎಲ್ಲ ಅವೆಯವಗಳನ್ನು ಇದೇ ರೀತಿ

32 ವಜ್ರದುಂಗುರ

ಬಹಿಷ್ಯರಿಸಿದರೆ ನನ್ನ ಅವಸ್ಥೆಯೇನಾಗುತ್ತಿತ್ತೆಂದು ಊಹಿಸಿದೆ. ಆದರೆ ಈಗ ನಾನು ಆರೋಗ್ಯವಂತನಾಗಿರುವೆ. ಅದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದೆ. ನನ್ನ ಶರೀರದ ಪ್ರತಿಯೊಂದು ಅವಯವವನ್ನೂ ರೋಮವನ್ನೂ ನೋಡಿ ದಂಗಾಗಿ ಹೋದೆ. ಅವೆಲ್ಲವನ್ನು ನನಗೆ ದಯಪಾಲಿಸಿ ಸುರಕ್ಷಿತವಾಗಿರಿಸಿದ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದೆ.

ನನ್ನ ಮನಸ್ಸು ಹೇಳಿತು- 'ಮನುಷ್ಮಾ! ಅಹಂಕಾರ ಪಡಬೇಡ. ಅಲ್ಲಾಹನು ನಮ್ಮನ್ನು ನಿನ್ನ ನಿಯಂತ್ರಣಕ್ಕೆ ಕೊಟ್ಟಿದ್ದಾನೆ. ನಾವು ನಿನ್ನ ಅಧೀನರು. ಒಂದು ದಿನ ನಿನಗೆ ಅಲ್ಲಾಹನ ಮುಂದೆ ಹಾಜರಾಗಲಿಕ್ಕಿದೆ. ಅಂದು ನಾವೆಲ್ಲರೂ ನಿನ್ನ ವಿರುದ್ಧ ಸಾಕ್ಷಿ ನುಡಿಯುವೆವು.'

ನನ್ನ ಶರೀರ ಕಂಪಿಸಿತು. ತುಂಬಾ ಬೆವರಿದ. ಪರಲೋಕದ ಭಯಾನಕ ಸನ್ನಿವೇಶವನ್ನು ಊಹಿಸಿ ಗಟ್ಟಿಯಾಗಿ ರೋದಿಸಲಾರಂಭಿಸಿದೆ. ನನ್ನ ತಂದೆ-ತಾಯಿ ಮತ್ತು ಮನೆಯ ಇತರರು ಓಡಿ ಬಂದರು. 'ಏನಾಯಿತು ನಿನಗೆ! ಹೇಳು' ಎಂದು ವಿಚಾರಿಸಿದರು. ನಾನು ಕನಸಿನಲ್ಲಿ ನಡೆದ ಘಟನೆಯನ್ನೆಲ್ಲ ವಿವರಿಸಿದೆ. ಎಲ್ಲರೂ ಪರಲೋಕದ ದಿನವನ್ನು ನೆನೆದು ಅತ್ತರು. ಅಲ್ಲಾಹನಲ್ಲಿ ಎಲ್ಲರೂ ತೌಬಾ ಮಾಡಿದೆವು. ಮುಂದಿನ ಬದುಕನ್ನು ಅಲ್ಲಾಹನ ಅನುಸರಣೆಯಲ್ಲಿ ಕಳೆಯುವೆವೆಂದು ಪ್ರತಿಜ್ಞೆ ಮಾಡಿದೆವು.

ಶಶ